ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಾನು ಆಂದ್ರಿತಾ ಅಲ್ಲಾರೀ.. ಐಂದ್ರಿತಾ! (Manasare | Yogaraj Bhat | Aindritha | Andritha Rey)
ಸುದ್ದಿ/ಗಾಸಿಪ್
Feedback Print Bookmark and Share
 
Aindritha Rey
MOKSHA
ಮುದ್ದುಮುದ್ದಾಗಿ ಕಣ್ಣಂಚಿನಲ್ಲೇ ನಗುವ ಮೋಹಕ ನಟಿ ಆಂದ್ರಿತಾ ಹೆಸರು ಆಂದ್ರಿತಾ ಅಲ್ಲವೇ ಅಲ್ಲವಂತೆ. ಆದರೆ ಎಲ್ಲರೂ ತಾನು ಆಂದ್ರಿತಾ ಆಗಿಯೇ ಕನ್ನಡದಲ್ಲಿ ಖ್ಯಾತಿ ಪಡೆದಿರೋದಕ್ಕೆ ಆಂದ್ರಿತಾ ಮೂತಿ ಸೊಟ್ಟಗೆ ಮಾಡಿ ಬೇಸರಿಸುತ್ತಾರೆ.

ಸದ್ಯದಲ್ಲೇ ಯೋಗರಾಜ ಭಟ್ಟರ ಮನಸಾರೆ ಚಿತ್ರದ ಮೂಲಕ ಥಿಯೇಟರ್‌ಗಳಿಗೆ ಲಗ್ಗೆಯಿಡಲಿರುವ ಆಂದ್ರಿತಾ ಕನ್ನಡದಲ್ಲಿ ಗಟ್ಟಿಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ. ಬತ್ತಳಿಕೆಯಲ್ಲಿ ಸಾಕಷ್ಟು ಚಿತ್ರಗಳಿರೋದೇ ಇದಕ್ಕೆ ಸಾಕ್ಷಿ. ಇಂತಿಪ್ಪ ಆಂದ್ರಿತಾ, ನನ್ನ ಹೆಸರು ಆಂದ್ರಿತಾ ಎಂದು ಎಲ್ಲರೂ ತಪ್ಪಾಗಿ ಬರೆಯುತ್ತಾರೆ. ಹೇಳುತ್ತಾರೆ ಹಾಗೂ ಕರೆಯುತ್ತಾರೆ ಕೂಡಾ. ಆದರೆ ನನ್ನ ಹೆಸರು ಐಂದ್ರಿತಾ. ಮಾಧ್ಯಮದವರೂ ಸೇರಿದಂತೆ ಚಿತ್ರದಲ್ಲೂ ಕೂಡಾ ನನ್ನನ್ನು ತೆರೆಯ ಮೇಲೆ ಆಂದ್ರಿತಾ ಎಂದೇ ಬರೆಯುತ್ತಾರೆ. ಆದರೆ ನನಗೆ ಆಂದ್ರಿತಾ ಆಗೋದು ಇಷ್ಟವಿಲ್ಲ. ಐಂದ್ರಿತಾ ಎಂದು ಬಾಯಿ ತುಂಬ ಕರೆದರೆ ಸಂತೋಷ ಎಂದು ಕಣ್ಣಲ್ಲಿ ಮಿಂಚು ಮಿಂಚಿಸಿ ನಗುತ್ತಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಐಂದ್ರಿತಾ, ಆಂದ್ರಿತಾ ರೇ, ಮನಸಾರೆ, ಯೋಗರಾಜ್ ಭಟ್