ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಈಕೆ ಕನ್ನಡದ ಡೈಸಿ ನಾಯ್ಡು! (Daisy Bopanna | Daisy Naidu | Garam Masala)
ಸುದ್ದಿ/ಗಾಸಿಪ್
Feedback Print Bookmark and Share
 
Daisy Bopanna
IFM
ಡೈಸಿ ನಾಯ್ಡು..! ಯಾರೀಕೆ. ಊಹೂಂ ಎಲ್ಲೂ ಈ ಹೆಸರು ಕೇಳಿದ ನೆನಪಿಲ್ಲ ಅಲ್ಲವೇ. ಈಕೆ ಹೊಸ ಬೆಡಗಿಯೇನಲ್ಲ. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಚಿತ್ರಗಳಲ್ಲಿ ಕಾಣಿಸಿ ತನ್ನ ಸೌಂದರ್ಯ ಹಾಗೂ ಅಭಿನಯದಿಂದ ಮನೆ ಮಾತಾಗಿದ್ದಾಳೆ. ಬಾಲಿವುಡ್ಡಿನಲ್ಲೂ ತನ್ನ ಛಾಪು ಮೂಡಿಸಿದ್ದಾಳೆ. ಹೌದು. ಈಕೆ ಅದೇ 'ಸ್ಪೈಸಿ ಡೈಸಿ' ಖ್ಯಾತಿಯ ಡೈಸಿ ಬೋಪಣ್ಣ!!!

ಯಾವಾಗಿಂದ ಈಕೆ ಡೈಸಿ ನಾಯ್ಡು ಆದಳಪ್ಪಾ..? ಹಾಗಾದ್ರೆ ಈಕೆ ಸುದ್ದಿಯೇ ಇಲ್ಲದೆ ಮದುವೆ, ಗಿದ್ವೆಯೇನಾದರೂ ಮಾಡಕೊಂಡಳಾ ಎಂದು ತಲೆಕೆರೆಯಬೇಡಿ. ವಿಷಯ ಸಿಂಪಲ್. ಈಗಷ್ಟೇ ಈಕೆ ತನ್ನ ಬೋಪಣ್ಣ ಎಂಬ ಹೆಸರನ್ನು ಪಕ್ಕದಲ್ಲಿಟ್ಟು ಇನ್ನು ಮುಂದೆ ಅಮ್ಮನ ಸರ್‌ನೇಮ್ ನಾಯ್ಡುವನ್ನು ತನ್ನ ಹೆಸರಿನ ಪಕ್ಕ ಸೇರಿಸಲು ಬಯಸಿದ್ದಾಳೆ. ಹಾಗಾಗಿ ಇನ್ನೀಕೆ ಡೈಸಿ ನಾಯ್ಡು!

ಡೈಸಿಯಿಂದ 'ಬೋಪಣ್ಣ'ನನ್ನು ಓಡಿಸಿ 'ನಾಯ್ಡು' ಯಾಕೆ ಬಂತು ಎಂದರೆ ಆಕೆಯೇ ಶಾಂತವಾಗಿ, ನಾನು ಡೈಸಿ ಬೋಪಣ್ಣ ಎಂಬ ನಾಮಧೇಯದಿಂದ ಪ್ರಸಿದ್ಧಿ ಪಡೆದರೂ ಇನ್ನು ಮುಂದೆ ಡೈಸಿ ನಾಯ್ಡು ಎಂದೇ ನನ್ನ ಹೆಸರನ್ನು ಬಳಸುತ್ತೇನೆ. ಅಮ್ಮ ನನಗಾಗಿ ಎಷ್ಟೆಲ್ಲ ಮಾಡಿದ್ದಾಳೆ. ಆಕೆ ಸದಾ ನನ್ನ ಒಳ್ಳೆಯದಕ್ಕೆ ನನ್ನ ಗೈಡ್ ಆಗಿದ್ದಾಳೆ. ಹಿಂದಿಯಲ್ಲಿ ನಾನು ಜಾನ್ ಅಬ್ರಹಾಂ ಜತೆಗೆ ನಟಿಸಿದ ಗರಂ ಮಸಾಲಾ ಚಿತ್ರ ಹಿಟ್ ಆಯಿತು. ಆದರೂ ಚಿತ್ರರಂಗದಲ್ಲಿ ಸಾಕಷ್ಟು ಅವಕಾಶಗಳಿದ್ದರೂ ನಾನು ನನ್ನ ಡಿಗ್ರಿ ಮುಗಿಸಿದೆ. ಅದಕ್ಕೆ ಕಾರಣ ಅಮ್ಮ. ಮೊದಲು ಓದು. ಆಮೇಲೆ ಕೆರಿಯರ್ ಇದ್ದೇ ಇದೆ ಎಂದಳು ಅಮ್ಮ. ಅಮ್ಮನಿಗಾಗಿ ಓದಿದೆ. ಈಗ ಮತ್ತೆ ಚಿತ್ರರಂಗಕ್ಕೆ ಬಂದಿದ್ದೇನೆ. ಕೈಯಲ್ಲಿ ಸಾಕಷ್ಟು ಚಿತ್ರಗಳೂ ಇದೆ. ಮೂರು ಹಿಂದಿ ಚಿತ್ರಗಳೂ ಇವೆ. ಓದಿದ್ದು ಒಳ್ಳೆಯದಾಯಿತು ಅಂತ ಈಗನಿಸುತ್ತಿದೆ. ಅದಕ್ಕಾಗಿ ಅಮ್ಮನ ಹೆಸರು ನಾಯ್ಡುವನ್ನು ನಾನಿನ್ನು ಮುಂದೆ ನನ್ನ ಹೆಸರುಗಳಲ್ಲಿ ಬಳಸುತ್ತೇನೆ ಅಂತಾಳೆ ಈ ಅಮ್ಮನ ಮಗಳು ಸ್ಪೈಸಿ ಡೈಸಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಡೈಸಿ ಬೋಪಣ್ಣ, ಡೈಸಿ ನಾಯ್ಡು, ಗಾಳಿಪಟ, ಗರಂ ಮಸಾಲ