ಜಾಲಿಡೇಸ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಸ್ಪೂರ್ತಿ. ಮಾತೆತ್ತಿದರೆ ನಾನ್‌ಸ್ಟಾಪ್ ನಗು ಚೆಲ್ಲುವ ಸಂಪಿಗೆ ಈಗ ನಾಗೇಶ್ ನಿರ್ದೇಶನದ ಒಲವೇ ವಿಸ್ಮಯ ಚಿತ್ರದ ನಾಯಕಿ.
ಎಂ.ಡಿ. ಶ್ರೀಧರ್ ನಿರ್ದೇಶನದ ಜಾಲಿಡೇಸ್ ಮೂಲಕ ಹೊರಬಂದ ಕನ್ನಡದ ಪ್ರತಿಭೆ ಬಳಿಕ ಎಸ್. ನಾರಾಯಣ್ ನಿರ್ದೇಶನದ ಚೆಲ್ಲಿದರು ಸಂಪಿಗೆಯಾ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಆದರೆ ಮೂರೇ ದಿನದಲ್ಲಿ ಅದು ಹೇಳ ಹೆಸರಿಲ್ಲದೆ ಮಾಯಾವಾಯಿತು.
ಈಗ ಒಲವೇ ವಿಸ್ಮಯ ಚಿತ್ರ ಪ್ರೇಕ್ಷಕರಿಗೆ ವಿಸ್ಮಯ ಮೂಡಿಸಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಸ್ಪೂರ್ತಿ. ನಗುವಿನಂತೆ ಮಾತು ಕೂಡಾ ನಾನ್‌ಸ್ಟಾಪೇ. ಆಕೆ ಹೇಳುವಂತೆ, ನಿರ್ದೇಶಕರು ಥೇಟ್ ಎಸ್. ನಾರಾಯಣ್ ಥರ. ಬೆಳಿಗ್ಗೆ ಆರು ಗಂಟೆಗೆ ಶೂಟಿಂಗ್ ಸ್ಥಳಕ್ಕೆ ಕರೆಸಿ, ಸೂರ್ಯೋದಯಕ್ಕೂ ಮುಂಚೆ ಶಾಟ್ ತೆಗೀತಾರ್ರೀ... ಎಂದು ಗೋಳ್ಳ್ ಅಂತ ನಕ್ಕರು. ಆದರೆ ಎಸ್. ನಾರಾಯಣ ಥರ ಎನ್ನುವ ಮಾತು ಸ್ವಲ್ಪ ಅರ್ಥವಾಗಿಲ್ಲ. ಹಾಗಾದರೆ ಅವರ ಚಿತ್ರದಲ್ಲಿ ನಟಿಸಿ ಇವತ್ತು ಮೂಲೆ ಸೇರುವ ಅಗತ್ಯವಿತ್ತೇ ಎಂಬ ಪ್ರಶ್ನೆಗೆ ಅವರು ಸ್ಪೂರ್ತಿದಾಯಕವಾದ ಉತ್ತರವನ್ನೇ ನೀಡಿದರು.
ಅವರು ಹೇಗೆ ಮಾಡಲಿ, ಏನೇ ಮಾಡಲಿ ಯಾವುದನ್ನೇ ಮಾಡಲಿ, ಆದರೆ ಅದು ಸರಿಯಾಗಿರುತ್ತೆ. ಅಂಥವರ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಅಮೂಲ್ಯ ಭಾಗ್ಯ ಯಾರಿಗಿದೆ ಹೇಳಿ ಎಂದು ಉತ್ತರ ನೀಡುತ್ತಾರೆ ಸ್ಪೂರ್ತಿ.