ಪೊಲೀಸ್ ಅಧಿಕಾರಿಯಾಗಿದ್ದು ನಂತರ ನಟನಾದ, ನಂತರ ರಾಜಕಾರಣಿಯೂ ಆದ ಬಿ.ಸಿ.ಪಾಟೀಲ್ ಈಗ ತನ್ನ ಸೆಲ್ಯೂಟ್ ಚಿತ್ರದ ಮೂಲಕ ಮತ್ತೆ ಎಂಟ್ರಿಯಾಗುತ್ತಿರುವುದು ಹಳೇ ಸುದ್ದಿ. ಆದರೆ ಈ ಚಿತ್ರ ಸದ್ಯದ ರಾಜಕಾರಣ ಹಾಗೂ ನನ್ನ ಖಾಸಗಿ ಜೀವನದ ಪ್ರತಿರೂಪದಿಂತಿದೆ ಎಂದು ಸೆಲ್ಯೂಟ್ನ ಕಥೆ ತಿರುಳನ್ನು ಬಿಚ್ಚಿದ್ದಾರೆ.
ವಿಧಾನಸಭೆಯಲ್ಲಿ ಸೆಲ್ಯೂಟ್ ಚಿತ್ರದ ಬುಧವಾರದ ಪ್ರೀಮಿಯರ್ ಪ್ರದರ್ಶನದ ಆಮಂತ್ರಣ ಪತ್ರ ಹಚ್ಚಿದ ಬಿ.ಸಿ.ಪಾಟೀಲ್, ಈ ಚಿತ್ರದ ಬಹುತೇಕ ಕಥೆ, ಸದ್ಯದ ರಾಜಕೀಯಕ್ಕೆ ಹಿಡಿದ ಕನ್ನಡಿ. ಒಬ್ಬ ಪೊಲೀಸ್ ಅಧಿಕಾರಿ ರಾಜಕಾರಣಿಯಾಗುವ ಕಥಾಹಂದರ ಇದರಲ್ಲಿದೆ. ಇದು ಬಹುತೇಕ ನನ್ನ ಜೀವನದ ಕಥೆಯನ್ನೂ ಹೊಂದಿದೆ. ರಾಜಕಾರಣಿಯಾಗ ಬಯಸುವ ಪೋಲೀಸ್ ಅಧಿಕಾರಿಗಳಿಗೆ ಈ ಚಿತ್ರ ಪಾಠವಿದ್ದಂತೆ ಎಂದು ವಿವರಿಸಿದರು.
ಬಿ.ಸಿ.ಪಾಟೀಲ್ ಬಜೆತೆ ಅಶ್ವಿನಿ ಈ ಚಿತ್ರದ ನಾಯಕಿ ನಟಿ. ಪ್ರೇಕ್ಷಕರು ಬಪಾಟೀಲ ಸೆಲ್ಯೂಟ್ಗೆ ಪ್ರತಿ ಸೆಲ್ಯೂಟ್ ಹೊಡೆಯುತ್ತಾರೋ... ಕಾಯಬೇಕು.