ಯೋಗರಾಜ ಭಟ್ಟರ ದಾಸರ ಕಥೆ!
ಭಟ್ಟರಿಗೂ ಇದು ಸ್ವಲ್ಪ ಕಿರಿಕ್ ಅನಿಸಿದೆ. ತಮ್ಮ ಹಾಡಿನ ಬಗ್ಗೆ ಎತ್ತಿರುವ ಚಕಾರವೇ ಇದಕ್ಕೆ ಕಾರಣ. 'ಹಳೆ ಪಾತ್ರೆ, ಹಳೆ ಕಬ್ಣ.... ಸೋಪ್ ಹಾಕ್ಕೊಳ್ಳಿ, ತಲೆ ಬಾಚ್ಕಳ್ಳಿ...' ಎಂಬ ಹಾಡುಗಳಿಗೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಇದು ಯುವ ಜನಾಂಗದ ಹಾದಿ ತಪ್ಪಿಸುತ್ತದೆ ಎಂಬುದು ಅವರ ಅಂಬೋಣ.ಇದೇ ಯೋಗರಾಜ್ ಭಟ್ಟರಿಗೆ ಕಿರಿಕ್ ಮಾತ್ರ ಅಲ್ಲ ಕೋಪ ಕೂಡ ಇದೆ. 'ಅಲ್ಲಾರಿ.. ಸಾಹಿತ್ಯಕ್ಕೆ ಸಂಬಂಧಿಸಿದಂತೆ ರನ್ನ, ಜನ್ನ, ಪಂಪನ ಕಾಲದಲ್ಲೂ ಆರೋಪಗಳಿದ್ದವು. ಪುರಂದರ ದಾಸರ ಕೀರ್ತನೆಗೆ ಹಲವು ಆರೋಪಗಳು ಬಂದಿದ್ದವು. ಆದರೆ ಇಂದು ಅವರು ಅಗ್ರಗಣ್ಯರ ಸಾಲಿನಲ್ಲಿ ಕುಳಿತಿದ್ದಾರೆ. ಸಾಹಿತ್ಯ ಎಂದರೆ ಹೀಗೆಯೇ ಇರಬೇಕು ಎನ್ನುವ ಕಟ್ಟುಪಾಡು ನನ್ನದಲ್ಲ. ಒಂದು ವೇಳೆ ಕಟ್ಟುಪಾಡು ಇಟ್ಟುಕೊಂಡು ಬರೆಯುವವರನ್ನು ಬೊಟ್ಟು ಮಾಡಿ ತೋರಿಸುವುದಿಲ್ಲ. ಅದೂ ಬೇಕು, ಇದೂ ಬೇಕು. ಸಾಹಿತ್ಯದಲ್ಲಿ ಹೊಸತನವೇ ಜನರ ಇಷ್ಟಕ್ಕೆ ಕಾರಣವಾಗುವುದು ಎನ್ನುವುದು ಭಟ್ಟರ ಅಂಬೋಣ.ಸಧ್ಯಕ್ಕೆ ಭಟ್ಟರು ಮನಸಾರೆಯಲ್ಲಿ ಬ್ಯುಸಿಯಿದ್ದಾರೆ. ಚಿತ್ರವನ್ನು ಶೀಘ್ರವೇ ಬಿಡುಗಡೆಗೊಳಿಸಲು ಯೋಜನೆ ಹಮ್ಮಿಕೊಂಡಿದ್ದಾರೆ ಇವರು. ಅದರ ಸಾಹಿತ್ಯ ಹೇಗಿದೆ ನೋಡಬೇಕು.