ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಂಬರ್ ಒನ್ ಪಟ್ಟ ಬೇಡ ಎಂದ ಆಂದ್ರಿತಾ (Andritha Ray | Ramya | Kannada Film | Manasare | Dhool)
ಸುದ್ದಿ/ಗಾಸಿಪ್
Feedback Print Bookmark and Share
 
Andritha Ray
MOKSHA
ಕನ್ನಡ ಚಿತ್ರರಂಗದ ಬೊಂಬೆ ಎಂದರೆ ಆಂದ್ರಿತಾ ರೇ. ಜಂಗ್ಲಿ ಚಿತ್ರದ ನಂತರ ಗ್ಲಾಮರ್ ಗೊಂಬೆ ಎಂದು ಗಾಂಧಿನಗರದಲ್ಲಿ ಗುರುತಿಸಿಕೊಂಡ ಆಂದ್ರಿತಾಗೆ ನಂಬರ್ ಒನ್ ಸ್ಥಾನ ಬೇಡವಂತೆ.

ನಂಬರ್ ಒನ್ ನಾಯಕಿಯಾಗಬೇಕು ಎಂದು ಎಂದೂ ಬಯಸಿದವಳಲ್ಲ. ಈಗ ಯಾರು ಈ ಸ್ಥಾನದಲ್ಲಿ ಇದ್ದರೋ ಅವರೇ ಮುಂದುವರೆಯಲಿ. ನಾನಂತೂ ಸ್ಪರ್ಧೆಯಿಂದ ಹೊರ ಉಳಿದಿದ್ದೇನೆ ಎನ್ನುತ್ತಾರೆ ಆಂದ್ರಿತಾ. ದಂತವೈದ್ಯ ಓದುತ್ತಿದ್ದ ಆಂದ್ರಿತಾ ರೇ ಅದಕ್ಕೆ ತಿಲಾಂಜಲಿ ನೀಡಿ ಚಿತ್ರರಂಗದಲ್ಲಿ ನೆಲೆಯೂರಲು ಬಯಸಿದ್ದಾರೆ.

ಸಧ್ಯಕ್ಕೆ ಆಂದ್ರಿತಾ ಮನಸಾರೆ ಚಿತ್ರ ಮುಗಿಸಿ ಯೋಗೇಶ್ ಜೊತೆ ಧೂಳ್ ಚಿತ್ರಕ್ಕೆ ರೆಡಿಯಾಗುತ್ತಿದ್ದಾರೆ. ಅಂದಹಾಗೆ ರಮ್ಯ ಇವರ ಬೆಸ್ಟ್ ಫ್ರೆಂಡ್ ಅಂತೆ. ಇವರಿಬ್ಬರೂ ಬಿಡುವು ಸಿಕ್ಕಾಗ ಒಟ್ಟಿಗೆ ಬ್ಯಾಡ್‌ಮಿಟನ್ ಆಡುತ್ತಾರಂತೆ. ಆದರೆ ನಮ್ಮಿಬ್ಬರ ಮಾತು ಮಾತ್ರ ಸಿನಿಮಾ ಹೊರತಾಗಿರಬೇಕು. ಇಬ್ಬರು ಅದೇ ಕಂಡಿಷನ್ ಮೇಲೆ ಒಟ್ಟಿಗೆ ಸೇರುತ್ತೇವೆ ಎನ್ನುತ್ತಾರೆ ನಾನ್‌ವೆಜ್ ಪ್ರಿಯೆ ಆಂದ್ರಿತಾ ರೇ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಆಂದ್ರಿತಾ ರೇ, ರಮ್ಯ, ಕನ್ನಡ ಸಿನಿಮಾ, ಮನಸಾರೆ, ಧೂಳ್