ಇಂದು ಬರುತ್ತೆ ನಾಳೆ ಬರುತ್ತೆ ಎಂದು ಕಾದವರಿಗೆ ಇಲ್ಲಿದೆ ಸಿಹಿ ಸುದ್ದಿ. ಕನ್ನಡ ಚಿತ್ರರಂಗದಲ್ಲಿ ಬಹು ನಿರೀಕ್ಷಿತ ಚಿತ್ರ ರಾಜ್ ದಿ ಶೋ ಮ್ಯಾನ್ ಚಿತ್ರ ಮುಂದಿನ ತಿಂಗಳ 14ರಂದು ಬಿಡುಗಡೆಯಾಗುವ ನಿರೀಕ್ಷೆ ಇದೆ.
ಇದನ್ನು ಸ್ವತಃ ನಿರ್ದೇಶಕ ಪ್ರೇಮ್ ನಿರ್ಧರಿಸಿದ್ದಾರಂತೆ. ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿದೆ. ಈಗ ಪೋಸ್ಟ್ ಪ್ರೊಡಕ್ಷನ್ ಕಾರ್ಯ ನಡೆಯುತ್ತಿದೆ. ಇದರ ಮಧ್ಯೆ ಹಲವರು ಚಿತ್ರವನ್ನು ನಮ್ಮ ಚಿತ್ರಮಂದಿರದಲ್ಲಿಯೇ ಬಿಡುಗಡೆಗೊಳಿಸಿ ಎಂದು ನಿರ್ಮಾಪಕ ಸುರೇಶ್ ಗೌಡರ ಬೆನ್ನು ಹತ್ತುತ್ತಿದ್ದಾರಂತೆ.
ಅಷ್ಟೇ ಅಲ್ಲ. ಅವರ ಚಿತ್ರ ಮಂದಿರದಲ್ಲಿ ಬಿಡುಗಡೆ ಮಾಡಿದರೆ ಬಾಡಿಗೆ ದರವನ್ನು ಕಡಿಮೆ ಮಾಡುವುದಾಗಿ ಆಫರ್ ಬೇರೆ ಇದೆಯಂತೆ. ಆದರೆ ನಿರ್ದೇಶಕ ಪ್ರೇಮ್ ಈ ಚಿತ್ರವನ್ನು ರಾಜ್ಯದ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಿದ್ದಾರೆ.