ದಾಂಡಿಗನಾಗಲಿರುವ ಪಂಕಜ್
ಪುತ್ರ ಪಂಕಜ್ಗಾಗಿ ಇನ್ನೊಂದು ಚಿತ್ರ ತೆಗೆಯುತ್ತಿದ್ದಾರೆ ನಿರ್ದೇಶಕ ಎಸ್. ನಾರಾಯಣ್. ಈ ಬಾರಿ ನಾರಾಯಣ್ ಆಕ್ಷನ್ ಚಿತ್ರಕ್ಕೆ ಕೈ ಹಾಕಿದ್ದಾರೆ.ಚಿತ್ರದ ಹೆಸರು ದಾಂಡಿಗ. ಹೆಸರೇ ಹೇಳುವಂತೆ ಇಲ್ಲಿ ಸಾಹಸಕ್ಕೇ ಪ್ರಮುಖ ಆದ್ಯತೆ. ಚಿತ್ರಕ್ಕೆ ಇನ್ನು ನಾಯಕಿ, ತಂತ್ರಜ್ಞರ ಆಯ್ಕೆಯಾಗಬೇಕಿದೆ. ಅಲ್ಲಿಗೆ ಕಾಮಿಡಿ, ಸೆಂಟಿಮೆಂಟ್ ಚಿತ್ರಗಳನ್ನೇ ಹೆಚ್ಚು ನಿರ್ದೇಶಿಸಿದ್ದ ನಾರಾಯಣ್ ಆಕ್ಷನ್ ಚಿತ್ರದಲ್ಲೂ ಅದೃಷ್ಟ ಪರೀಕ್ಷೆಗೆ ಹೊರಟಿದ್ದಾರೆ. ಈಗಾಗಲೇ ಪಂಕಜ್ ಮತ್ತು ರೂಪಿಕಾ ಅಭಿನಯದ ಚೆಲುವಿನ ಚಿಲಿಪಿಲಿ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಮುಂದಿನ ತಿಂಗಳ ಅಂತ್ಯದಲ್ಲಿ ಬಿಡುಗಡೆ ಮಾಡುವ ಯೋಜನೆಯಲ್ಲಿದ್ದಾರೆ ನಿರ್ದೇಶಕರು. ಈ ತಿಂಗಳ 26ರಂದು ಚಿತ್ರದ ಆಡಿಯೋ ಮಾರುಕಟ್ಟೆಗೆ ಲಗ್ಗೆ ಇಡಲಿದೆ.ಅಂದಹಾಗೆ, ಇನ್ನೊಂದು ವಿಷಯ ದಾಂಡಿಗ ಚಿತ್ರದ ಮೂಲಕ ತಮ್ಮ ಚ ಕಾರದಿಂದ ಆರಂಭವಾಗುವ ಚಿತ್ರದಿಂದ ಹೊರಬಂದಿದ್ದಾರೆ ನಾರಾಯಣ್. ಅದೇನು ಅದೃಷ್ಟ ಪರೀಕ್ಷೆಗೆ ನಾರಾಯಣ್ ಹೊರಟಿದ್ದಾರೋ... ಕಾಯಬೇಕು.