ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಬೆನ್ನುತಟ್ಟಿಸಿಕೊಂಡ ಮ್ಯಾಡ್‌ಲವ್ (Mad Love | Konnur Mahadev | Doddarange Gowda)
ಸುದ್ದಿ/ಗಾಸಿಪ್
Feedback Print Bookmark and Share
 
Ramu
MOKSHA
ಗಾಂಧಿನಗರಕ್ಕೆ ಏನಾದರೂ ಭಿನ್ನವಾಗಿರುವುದನ್ನು ನೀಡಬೇಕೆಂಬ ನಿಟ್ಟಿನಲ್ಲಿ ಹೊಸಬರ ತಂಡವೊಂದು ಕೆಲಸ ಮಾಡಿದೆ. 'ಮ್ಯಾಡ್‌ಲವ್'. ಇದು ಚಿತ್ರದ ಹೆಸರು.

ಚಿತ್ರಕ್ಕೆ ನಿರ್ದೇಶಕರು ಕೊನ್ನೂರು ಮಹಾದೇವ. ಬಹುಶಃ ಗಾಂಧಿನಗರದ ಗಾಳಿ ಸೋಕಿ ತೇಜ ಎಂದು ಬದಲಿಸಿಕೊಂಡಿದ್ದಾರೆ. ಈ ಹುಚ್ಚು ಪ್ರೀತಿಗೆ ಬಿದ್ದಿರುವವರು ರಾಮು ಹಾಗೂ ರವೀನಾ. ಇಬ್ಬರಿಗೂ ಪ್ರಥಮ ಅನುಭವ. ಈ ಪ್ರೀತಿಗೆ ಗಂಗಾಧರ್ ದುಡ್ಡು ಸುರಿದಿದ್ದಾರೆ.

ಪ್ರೀತಿಯ ಉನ್ಮತ್ತ ಸ್ಥಿತಿಯನ್ನು ತಲುಪಿದ ನಾಯಕ ಸತ್ತ ತನ್ನ ಪ್ರಿಯತಮೆಯ ಶವವನ್ನು ಗೋರಿಯಿಂದ ಮೇಲೆತ್ತಿ ಗೋಳಾಡುವ ದೃಶ್ಯಗಳು ಚಿತ್ರದಲ್ಲಿವೆ ಎಂದು ಚಿತ್ರದ ಕಥೆಯ ಬಗ್ಗೆ ಬಣ್ಣಿಸಿದರು ಸಾಹಿತಿ ದೊಡ್ಡರಂಗೇಗೌಡರು. ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆ ಮಾಡಲಾಯಿತು. ಚಿತ್ರೀಕರಣ ಪೂರ್ಣಗೊಂಡಿದ್ದು, ಸೆನ್ಸಾರ್ ಮಂಡಳಿ ಯು ಪ್ರಮಾಣ ಪತ್ರ ನೀಡಿ ಬೆನ್ನು ತಟ್ಟಿದೆ. ಶೀಘ್ರವೇ ಬಿಡುಗಡೆ ನಡೆಸಲು ಯೋಜಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮ್ಯಾಡ್ಲವ್, ಕೊನ್ನೂರು ಮಹಾದೇವ್, ದೊಡ್ಡರಂಗೇಗೌಡ