ಬಿಯಾಂಕಾಳ ಕನ್ನಡದ ಮಾತು
ಈಕೆ ಸಂಪೂರ್ಣ ಕನ್ನಡ ಕಲಿಯುವಷ್ಟರಲ್ಲಿ ಕನ್ನಡ ಚಿತ್ರರಂಗದಲ್ಲಿ ಉಳಿಯೋದೇ ಡೌಟು ಎಂದಾಗಲೇ ಬಿಯಾಂಕಾ ದೇಸಾಯಿ ತನ್ನ ಕನ್ನಡದಿಂದಲೇ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ.ಇವರು ಮಾತನಾಡುವ ಅಲ್ಪಸ್ವಲ್ಪ ಕನ್ನಡ ನೋಡಿ ಈಕೆ ಕನ್ನಡತಿಯೇ ಇರಬೇಕೆಂದು ತೆಲುಗು ಮೂಲದ ನಿರ್ಮಾಪಕ-ನಿರ್ದೇಶಕ ಗೀತಾಕೃಷ್ಣ ಇವರನ್ನು ಕಾಫಿ ಶಾಪ್ ಚಿತ್ರಕ್ಕೆ ಆಯ್ಕೆ ಮಾಡಿದ್ದಾರೆ. ಈ ಚಿತ್ರ ಕನ್ನಡದಲ್ಲಿ ಮಾತ್ರವಲ್ಲ ತಮಿಳು ಮತ್ತು ತೆಲುಗು ಭಾಷೆಗಳಲ್ಲೂ ಏಕಕಾಲಕ್ಕೆ ಸಿದ್ಧವಾಗುತ್ತಿದೆ. ಇದೇ ವೇಳೆ ಬಿಯಾಂಕ ಇನ್ನೂ ಎರಡು ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಪ್ರತಾಪ್ ಗೌಡ ನಿರ್ದೇಶನದ ಉದ್ಯಾನ್ ಎಕ್ಸ್‌ಪ್ರೆಸ್. ಇದು ಮುಹೂರ್ತಕ್ಕೂ ಮುಂಚೆಯೇ ಸುದ್ದಿಮಾಡಿತ್ತು. ಇದರಲ್ಲಿ ಬಿಯಾಂಕಾ ಜೊತೆಗೆ ನೀತು, ಹಿಂದಿಯ ರಾಕ್ಆನ್ ಚಿತ್ರದ ಪ್ರಾಚಿ ದೇಸಾಯಿ, ಗರಂಮಸಾಲದ ನರ್ಗೀಸ್ ಅಭಿನಯಿಸುತ್ತಿದ್ದಾರೆ. ಈ ಚಿತ್ರ ಮುಂದಿನ ತಿಂಗಳ ಎರಡನೇ ವಾರದಲ್ಲಿ ಸೆಟ್ಟೇರಲಿದೆ. ಇದರ ಜೊತೆ ಪಯಣದ ಕಿರಣ್ಗೋವಿ ನಿರ್ದೇಶನದ ಇನ್ನು ಹೆಸರಿಡದ ಚಿತ್ರಕ್ಕೆ ಬಿಯಾಂಕಾ ನಾಯಕಿ. ಅಂತೂ ಬಿಂಕವಲ್ಲದ ಬಿಯಾಂಕಾ ಕನ್ನಡ ಚಿತ್ರರಂಗಕ್ಕೆ ಲಗ್ಗೆ ಇಟ್ಟಿದ್ದಾರೆ.