ಅಪ್ಪು ಅಂಡ್ ಪಪ್ಪು
![](/img/cm/searchGlass_small.png)
ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್ ಚಿತ್ರದ ಬಳಿಕ ಮತ್ತೊಂದು ಫ್ಯಾಂಟಸಿ ಮಕ್ಕಳ ಚಿತ್ರ ಸಿದ್ಧವಾಗುತ್ತಿದೆ. ಇದನ್ನು ಮಸ್ತ್ ಮಜಾ ಮಾಡಿ ನಿರ್ಮಾಪಕ ಸೌಂದರ್ಯ ಜಗದೀಶ್ ನಿರ್ಮಿಸುತ್ತಿದ್ದಾರೆ. ಇದಕ್ಕಾಗಿ ಪುತ್ರ ಸ್ನೇಹಿತ್‌ನನ್ನೂ ಕರೆತಂದಿದ್ದಾರೆ. ಸ್ನೇಹಿತ್ ಈ ಮೊದಲು ಮಸ್ತ್ ಮಜಾ ಮಾಡಿ ಚಿತ್ರದಲ್ಲಿ ಉಪೇಂದ್ರರೊಂದಿಗೆ ಐಟಂ ಹಾಡಿಗೆ ಹೆಜ್ಜೆಹಾಕಿದ್ದ. ಆವಾಗಲೇ ಮಗನಿಗಾಗಿ ಚಿತ್ರ ನಿರ್ಮಿಸುವುದಾಗಿ ಸೌಂದರ್ಯ ಜಗದೀಶ್ ಘೋಷಿಸಿದ್ದರು. ಚಿತ್ರದಲ್ಲಿ ಸ್ನೇಹಿತ್ ಜತೆ ಚಿಂಪಾಜಿಯೊಂದು ಇರುತ್ತದೆ. ಸ್ನೇಹಿತ್ ಅಪ್ಪು ಆದರೆ ಚಿಂಪಾಂಜಿ ಪಪ್ಪು. ಇಬ್ಬರೂ ಸೇರಿ ಸಮಸ್ಯೆಯೊಂದನ್ನು ಬಗೆಹರಿಸುವುದೇ ಚಿತ್ರದ ಕಥಾವಸ್ತು.ಇದೀಗ ಪಪ್ಪುಗಾಗಿ ಇಂಡೋನೇಷ್ಯಾಕ್ಕೆ ನಿರ್ದೇಶಕ ಅನಂತರಾಜ್ ಮತ್ತು ನಿರ್ಮಾಪಕರು ತೆರಳಿದ್ದಾರೆ. ಚಿತ್ರದಲ್ಲಿ ಸ್ನೇಹಿತ್ ಜೊತೆ ನಗಿಸಲು ಕೋಮಲ್, ರಂಗಾಯಣ ರಘು, ಶರಣ್ ಕೂಡ ನಟಿಸುತ್ತಿದ್ದಾರೆ.