ಇದೊಂದು ತಮ್ಮ ವೃತ್ತಿಜೀವನದಲ್ಲೊಂದು ಮೈಲುಗಲ್ಲಾಗಲಿದೆ ಎನ್ನುತ್ತಾರೆ ನೀತೂ. ಕನ್ನಡ, ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ತಯಾರಾಗಲಿರುವ ಚಿತ್ರದಲ್ಲಿ ಹಲವು ವಿಶೇಷತೆಗಳಿವೆ. ನನ್ನ ಸಿನಿಮಾ ಜೀವನದಲ್ಲೇ ಇದೊಂದು ಉತ್ತಮ ಅವಕಾಶ. ನಿರ್ದೇಶಕರು ಹೇಳಿರುವಂತೆ ನಾಲ್ವರು ಯುವತಿಯರ ಜೀವನವೇ ಚಿತ್ರದ ಕಥಾವಸ್ತು. ದೊಡ್ಡ ತಯಾರಿಯೊಂದಿಗೇ ಚಿತ್ರ ಕೈಗೆತ್ತಿಕೊಳ್ಳುತ್ತಿದ್ದಾರೆ. ಮತ್ತೊಂದು ಸುತ್ತಿನ ಮಾತುಕತೆಯ ನಂತರವಷ್ಟೇ ನನ್ನ ಪಾತ್ರದ ಬಗ್ಗೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ ಎನ್ನುತ್ತಾರೆ ನೀತೂ.
ಗಾಳಿಪಟ ಚಿತ್ರದ ಬಳಿಕ ಸಾಕಷ್ಟು ನೀರೀಕ್ಷೆಯಲ್ಲಿದ್ದ ನೀತೂಗೆ ಅಷ್ಟೇನು ಅವಕಾಶಗಳು ಬಂದಿಲ್ಲ. ಆದರೆ ಆ ಬಳಿಕ ಒಂದರ ಹಿಂದೆ ಒಂದರಂತೆ ಚಿತ್ರಗಳು ಹುಡುಕಿ ಬಂದವು. ಕೃಷ್ಣ ನೀ ಲೇಟಾಗಿ ಬಾರೋ, ಐತಲಕ್ಕಡಿ ಚಿತ್ರಗಳ ಜೊತೆಗೆ ಯೋಗರಾಜ್ ಭಟ್ಟರ ಮನಸಾರೆ ಚಿತ್ರದ ಒಂದು ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಸಧ್ಯಕ್ಕಂತು ಖುಷಿಯಾಗಿದ್ದಾರೆ ನೀತು. ತಮ್ಮ ಸಿನಿಮಾ ಜೀವನ ಸರಿಯಾದ ಹಾದಿಯಲ್ಲಿದೆ ಎಂಬ ವಿಶ್ವಾಸದೊಂದಿಗೆ ನೀತು ಉದ್ಯಾನ್ ಎಕ್ಸ್‌ಪ್ರೆಸ್‌ನ ಬೋಗಿಯಲ್ಲಿ ಬಲಗಾಲಿಟ್ಟು ಹತ್ತಿದ್ದಾರೆ. ಯಾವುದಕ್ಕೂ ಕಾದು ನೋಡಬೇಕಷ್ಟೆ.