ಇತ್ತೀಚೆಗಷ್ಟೇ ಉಪೇಂದ್ರ ಅವರು ನಿರ್ದೇಶನದ ಚಿತ್ರವೊಂದು ಸೆಟ್ಟೇರಲಿದೆ ಎಂಬ ವದಂತಿ ಇದೀಗ ನಿಜವಾಗಿದೆ. ಅವರೇ ತಿಳಿಸಿರುವಂತೆ ತುಂಬ ಸಿಂಪಲ್ ಆದ ಚಿಹ್ನೆಯನ್ನು ಇಟ್ಟುಕೊಂಡು ಚಿತ್ರ ಮಾಡುತ್ತಿದ್ದಾರೆ.
ಸೂಪರ್ ಉದ್ಗಾರದ ಹಸ್ತಸಂಕೇತ ಚಿತ್ರಕ್ಕೆ ಶೀರ್ಷಿಕೆಯಾಗಿದೆ. ಅಂದರೆ, ಹೆಬ್ಬೆರಳು ಮತ್ತು ತೋರುಬೆರಳು ಜೋಡಿಸಿರುವ, ಸೂಪರ್ ಎಂದು ಹೇಳುವಾಗ ಬಳಸುವ ಹಸ್ತ ಸಂಕೇತ ಈ ಚಿತ್ರದ ಹೆಸರು. ಈ ಚಿತ್ರದ ಕತೆ, ಚಿತ್ರಕತೆ ಮತ್ತು ಸಂಭಾಷಣೆಯನ್ನು ಸ್ವತಃ ಉಪೇಂದ್ರ ಅವರೇ ಮಾಡಲಿದ್ದಾರೆ. ಚಿತ್ರವನ್ನು ಕನ್ನಡ ಮಾತ್ರವಲ್ಲ ತೆಲುಗು, ತಮಿಳು ಮತ್ತು ಹಿಂದಿ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಸಿದ್ಧಪಡಿಸಲು ನಿರ್ಧರಿಸಿದ್ದಾರೆ ಉಪೇಂದ್ರ.
ಕೆಲವು ಕಾರಣಗಳಿಂದ ಲಂಡನ್‌ಗೌಡ ಚಿತ್ರೀಕರಣ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದರಿಂದ ಉಪೇಂದ್ರ ಈ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಕೆಲವು ಮೂಲಗಳ ಪ್ರಕಾರ ಲಂಡನ್‌ಗೌಡ ತಂತ್ರಜ್ಞರು ಇಲ್ಲಿಯೂ ಕೆಲಸ ಮಾಡಲಿದ್ದಾರೆ. ಚಿತ್ರಕ್ಕೆ ಇನ್ನು ನಾಯಕಿಯ ಆಯ್ಕೆಯಾಗಿಲ್ಲ. ಚಿತ್ರೀಕರಣ ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗುವ ನಿರೀಕ್ಷೆ ಇದೆ. (ಉಪೇಂದ್ರ, ರಮ್ಯ ಅಭಿನಯದ ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್ ಚಿತ್ರದ ಫೋಟೋಗಳಿಗೆ ಇಲ್ಲಿ ಕ್ಲಿಕ್ ಮಾಡಿ)