ದಯಾಳ್ ನಿರ್ದೇಶನದ ಹರಿಕಥೆ ಶ್ರೀಹರಿಯಾಗಿದ್ದು ಹಳೆಸುದ್ದಿ. ಇದೀಗ ಶ್ರೀಹರಿಯ ಒಂದೊಂದೇ ಕಥೆಗಳು ಗಾಂಧಿನಗರದಲ್ಲಿ ಸುದ್ದಿ ಹಬ್ಬಿದೆ.
ಈ ಚಿತ್ರದಲ್ಲಿ ಮೊದಲ ಬಾರಿಗೆ ಮನಃಶಾಸ್ತ್ತ್ರದ ವಿದ್ಯಾರ್ಥಿನಿಯಾಗಿ ಪೂಜಾಗಾಂಧಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಇದು ನೆಗಟಿವ್ ರೋಲ್. ಈ ಚಿತ್ರದಲ್ಲಿ ಪೂಜಾಗಾಂಧಿ ಮತ್ತು ಆಕೆಯ ತಂಗಿ ರಾಧಿಕಾ ಗಾಂಧಿ ಇಬ್ಬರೂ ಸಮಾನ ಸುಖಿಗಳು, ಸಮಾನ ದುಃಖಿಗಳು!. ಅಂದರೆ ಸಮಾನ ಪಾತ್ರಾವಕಾಶ. ಒಂದು ಸಣ್ಣ ವ್ಯತ್ಯಾಸ ಎಂದರೆ ರಾಧಿಕಾಗಾಂಧಿ ಪಾಸಿಟಿವ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಇಬ್ಬರಿಗೂ ಒಟ್ಟಿಗೆ ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ಖುಷಿಯಿದೆ. ಇಂಥದ್ದೊಂದು ಪಾತ್ರವನ್ನು ಇದುವರೆಗೆ ನಾನು ಮಾಡಿಲ್ಲ ಎಂದು ಪೂಜಾ ಗಾಂಧಿ ಹೇಳಿದರೆ, ಅಕ್ಕನ ಜೊತೆ ಅಭಿನಯಿಸುವ ಭಾಗ್ಯ ಸಿಕ್ಕಿದ್ದೇ ಸಂತೋಷ ಎನ್ನುತ್ತಾರೆ ರಾಧಿಕಾ ಗಾಂಧಿ. ಇಬ್ಬರ ಜುಗಲ್ ಬಂದಿಯಲ್ಲಿ ಶ್ರೀಹರಿ ಕತೆ ಏನಾಗುತ್ತೋ ಕಾದು ನೋಡಬೇಕು.