ಐಂದ್ರಿತಾ ರೇ ಕುರಿತು ಎಷ್ಟು ಮಾತನಾಡಿದರೂ ಮುಗಿಯುವುದಿಲ್ಲ. ಸದ್ಯ ಗಾಂಧಿನಗರದಲ್ಲಿ ಚಾಲ್ತಿಯಲ್ಲಿರುವ ಸುದ್ದಿಯೆಲ್ಲ ಆಕೆಯದೇ. ಇದೀಗ ನನ್ನವನು ಚಿತ್ರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಐಂದ್ರಿತಾ.
ಕನ್ನಡದಲ್ಲಿ ಇದುವರೆಗೆ ಮಾಡಿರುವ ಚಿತ್ರಗಳಲ್ಲಿ ಇದೊಂದು ಕೆಟ್ಟ ಅನುಭವ ಎನ್ನುವುದು ಅವರದೇ ಅನಿಸಿಕೆ. ಚಿತ್ರದಲ್ಲಿ ನನ್ನನ್ನು ಬಹಳ ಕೆಟ್ಟದಾಗಿ ನಡೆಸಿಕೊಂಡರು. ನನಗೆ ಸರಿಯಾಗಿ ಸಂಭಾವನೆಯನ್ನು ನೀಡಿಲ್ಲ. ಆಡಿಯೋ ಬಿಡುಗಡೆಗೂ ಕರೆದಿಲ್ಲ. ಹಾಗಾಗಿ ಆ ಚಿತ್ರದ ಪ್ರಚಾರದಿಂದ ದೂರ ಉಳಿಯುವ ಬಗ್ಗೆ ಯೋಚಿಸುತ್ತಿದ್ದೇನೆ ಎಂದು ದೂರುತ್ತಾರೆ ಐಂದ್ರಿತಾ.
ಅದೆಲ್ಲ ಹಾಗಿರಲಿ. ಐಂದ್ರಿತಾ ರೇ ಈ ಮಧ್ಯೆ ಸ್ವಲ್ಪ ಚ್ಯೂಸಿಯಾಗಿದ್ದಾರಂತೆ. ರೀಮೇಕ್ ಚಿತ್ರಗಳಲ್ಲಿ ನಟಿಸಲು ಇಷ್ಟವಿಲ್ಲವಂತೆ. ರೀಮೇಕ್ ಚಿತ್ರಗಳನ್ನೇ ಬ್ಯಾನ್ ಮಾಡಬೇಕೆನ್ನುವುದು ಅವರ ಬಯಕೆ. ಆದರೆ ಇವರ್ಯಾಕೆ ರೀಮೇಕ್ ಚಿತ್ರಗಳಲ್ಲಿ ನಟಿಸುತ್ತಾರೆ ಎಂದರೆ, ಅದೂ ಬಿಟ್ರೇ ಬೇರೆ ಕೆಲಸನೇ ಇಲ್ಲವಲ್ಲ ಎಂದು ಮುಗ್ದವಾಗಿ ಕೈಚೆಲ್ಲುತ್ತಾರೆ ಐಂದ್ರಿತಾ. ಹೌದು. ಅದಕ್ಕಾಗಿಯೇ ಯೋಗಿ ಜೊತೆ ಧೂಳ್ನಲ್ಲಿ ನಟಿಸುತ್ತಿದ್ದಾರಂತೆ.