ಪುನೀತ್ಗೆ 'ಸುವರ್ಣಾ'ವಕಾಶ!
ರಾಜ್ ದಿ ಶೋಮ್ಯಾನ್ ಚಿತ್ರದ ಬಿಡುಗಡೆಗೆ ಕಾದಿರುವ ಪುನೀತ್ ರಾಜ್ಕುಮಾರ್ಗೆ ಈಗೊಂದು ಸುವರ್ಣಾವಕಾಶ ಬಂದಿದೆ. ಅಂಥದ್ದೇನಪ್ಪಾ ಸುವರ್ಣಾವಕಾಶ ಎಂದುಕೊಂಡು ತಲೆಬಿಸಿ ಮಾಡಬೇಡಿ. ಇದು ಸುವರ್ಣ ಅವಕಾಶ. ಅರ್ಥಾತ್ ಚಿನ್ನದ ಬ್ರ್ಯಾಂಡ್ ಒಂದರ ರಾಯಭಾರಿಯಾಗುವ ಅವಕಾಶ.ವಿಷಯ ಸಿಂಪಲ್. ಪುನೀತ್ ರಾಜ್ಕುಮಾರ್ಗೆ ಇತ್ತೀಚೆಗೆ ಪ್ರತಿಷ್ಠಿತ ಬ್ರ್ಯಾಂಡ್ಗಳ ರೂಪದರ್ಶಿ, ಜಾಹಿರಾತುಗಳಲ್ಲೂ ಅವಕಾಶ ಒಲಿದು ಬರುತ್ತಿದೆ. ಅದಕ್ಕೆ ತಾಜಾ ಸಾಕ್ಷಿ. ಇತ್ತೀಚೆಗಷ್ಟೇ, ಅವರು ಸುಪ್ರಸಿದ್ಧ ಆಭರಣ ಬ್ರ್ಯಾಂಡ್ಗಳಲ್ಲಿ ಒಂದಾದ ಮಲಬಾರ್ ಗೋಲ್ಡ್ನ ರಾಯಭಾರಿಯಾಗಿ ಆಯ್ಕೆಯಾಗಿರುವುದು!ಅಂದಹಾಗೆ, ಮಲಬಾರ್ ಗೋಲ್ಡ್ ನೀಡಿದ ಈ ಅವಕಾಶಕ್ಕೆ ಸ್ವತಃ ಪುನೀತ್ ಕೂಡಾ ಫುಲ್ ಖುಷ್ ಆಗಿದ್ದಾರಂತೆ. ಯಾಕಂತೆ ಗೊತ್ತಾ? ಈ ಹಿಂದೆ ಮಲಬಾರ್ ಗೋಲ್ಡ್ನ ರಾಯಭಾರಿಯಾಗಿದ್ದವರು ಖ್ಯಾತ ನಟ ಮೋಹನ್ ಲಾಲ್. ಪುನೀತ್ ಮೋಹನ್ ಲಾಲ್ರ ಕಟ್ಟಾ ಅಭಿಮಾನಿ!ನಾನು ಮೋಹನ್ ಲಾಲ್ ಅಭಿಮಾನಿ. ಅವರು ಮಲಬಾರ್ ಪ್ರಚಾರದ ರಾಯಭಾರಿಯಾಗಿದ್ದರು. ಆ ಪಾತ್ರವನ್ನು ನಾನು ನಿರ್ವಹಿಸುತ್ತಿರುವುದಕ್ಕೆ ತುಂಬ ಸಂತೋಷವಾಗುತ್ತಿದೆ ಎನ್ನುತ್ತಾರೆ ಪುನೀತ್. ಈ ಮೊದಲು ಸೆವೆನ್ ಅಪ್ ಸಂಸ್ಥೆಯ ನಿಂಬೂಸ್, ಬಾಷ್ ಕಂಪೆನಿಯ ಉಪಕರಣಗಳ ಬಿಡುಗಡೆಯಲ್ಲಿ ಪಾಲ್ಗೊಂಡಿದ್ದರು. ಹೀಗೆ ಪವರ್ ಸ್ಟಾರ್ ಪ್ರಚಾರ ರಾಯಭಾರಿಯಾಗಿಯೂ ತಮ್ಮ ಪವರ್ ತೋರಿಸುತ್ತಿದ್ದಾರೆ.