ಮತ್ತೊಬ್ಬ ಕನ್ನಡತಿ ಕಾಲಿವುಡ್ಡಿಗೆ ಕಾಲಿಟ್ಟಿದ್ದಾಳೆ. ಯೋಗಿಶ್ ಜೊತೆ ರಾವಣ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಸಂಚಿತಾ ಪಡುಕೋಣೆ ತಮಿಳು ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಸಣ್ಣಪುಟ್ಟ ಪಾತ್ರಗಳ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾಗಿದ್ದ ಸಂಚಿತಾ, ಮರುಭೂಮಿ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಕಾಣಿಸಿಕೊಂಡರು. ಆದರೆ ಚಿತ್ರ ಇನ್ನು ಬಿಡುಗಡೆಯಾಗಿಲ್ಲ. ಇದರ ಜೊತೆಗೆ ಯೋಗೀಶ್ ಅಭಿನಯದ ರಾವಣ ಚಿತ್ರದಲ್ಲಿ ಎರಡನೇ ನಾಯಕಿಯಾಗಿ ಕಾಣಿಸಿಕೊಂಡರು. ಇದರ ಬೆನ್ನಲ್ಲೇ ಇದೀಗ ತಮಿಳಿನ ಪಿಲ್ಲಾಯರ್ ಥೇರು ಕಡೈನ್ ಚಿತ್ರದಲ್ಲಿ ಹೊಸ ನಟ ಜಿತನ್ ರಮೇಶ್ ಜೊತೆ ನಾಯಕಿಯಾಗಿ ನಟಿಸುತ್ತಿದ್ದಾರೆ.
ಹಾಗಾದರೆ ಈಗ ಯಾಕೆ ತಮಿಳಿಗೆ ಎಂದರೆ, ಕನ್ನಡದಲ್ಲಿ ಅವಕಾಶಗಳು ಇಲ್ಲ ಎಂದಲ್ಲ. ಕನ್ನಡದಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಇದೇ ಖುಷಿಯಲ್ಲೇ ತಮಿಳಿನಿಂದಲೂ ಆಫರ್ ಬಂದಿದೆ ಎನ್ನುತ್ತಾರೆ ಸಂಚಿತಾ.