ಕನ್ನಡ, ತಮಿಳು, ತೆಲುಗು ಹಾಗೂ ಮಳಯಾಳಂ ಭಾಷೆಗಳ ದಕ್ಷಿಣ ಭಾರತೀಯ ಐಡಿಯಾ ಫಿಲಂಫೇರ್ ಪ್ರಶಸ್ತಿ ಪಟ್ಟಿ ಬಿಡುಗಡೆಗೊಂಡಿದೆ. ಹೈದರಾಬಾದ್‌ನಲ್ಲಿ ಶುಕ್ರವಾರ ರಾತ್ರಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕನ್ನಡದಲ್ಲಿ ಇ. ಕೃಷ್ಣಪ್ಪ ನಿರ್ಮಾಣದ ಶಶಾಂಕ್ ನಿರ್ದೇಶನದ ಮೊಗ್ಗಿನ ಮನಸು ಚಿತ್ರ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿ ಐದು ಪ್ರಶಸ್ತಿಗಳನ್ನು ಬಾಚಿಕೊಂಡರೆ, ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ ಚಿತ್ರ ಮೂರು ಹಾಗೂ ಮುಸ್ಸಂಜೆ ಮಾತು ಚಿತ್ರ ಎರಡು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಗಣೇಶ್ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾದರೆ, ನಟಿ ರಾಧಿಕಾ ಪಂಡಿತ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡರು.
ಕಣದಲ್ಲಿದ್ದವರು: ಅರಮನೆ, ಗಾಳಿಪಟ, ಸೈಕೋ ಹಾಗೂ ಗಾಳಿಪಟ ಚಿತ್ರಗಳು ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಮೊಗ್ಗಿನ ಮನಸು ಜತೆಗೆ ಸ್ಪರ್ಧೆಯ ಕಣದಲ್ಲಿ ಸೆಣೆಸಿದ್ದವು. ಅಂತಿಮವಾಗಿ ಮೊಗ್ಗಿನ ಮನಸು ಚಿತ್ರ ಪ್ರಶಸ್ತಿಗೆ ಭಾಜವಾಯಿತು.
ಅತ್ಯುತ್ತಮ ನಿರ್ದೇಶಕ ಪಟ್ಟಿಯಲ್ಲಿ ಗಾಳಿಪಟದ ಯೋಗರಾಜ್ ಭಟ್, ಮುಸ್ಸಂಜೆ ಮಾತು ಚಿತ್ರದ ಮಹೇಶ್, ತಾಜ್ ಮಹಲ್‌ನ ಆರ್.ಚಂದ್ರು ಹಾಗೂ ಸೈಕೋ ಚಿತ್ರದ ದೇವದತ್ತ ಕಣದಲ್ಲಿದ್ದರು. ಆದರೆ, ಮೊಗ್ಗಿನ ಮನಸು ಚಿತ್ರದ ಶಶಾಂಕ್ ಅತ್ಯುತ್ತಮ ನಿರ್ದೇಶಕರಾಗಿ ಆಯ್ಕೆಯಾದರು.
IFM
ಅತ್ಯುತ್ತಮ ನಟ ಪ್ರಶಸ್ತಿಗೆ ಗಾಳಿಪಟದಿಂದ ಗೋಲ್ಡನ್ ಸ್ಟಾರ್ ಗಣೇಶ್ ಜತೆ ಪೈಪೋಟಿಗೆ ಇಳಿದಿದ್ದು ತಾಜ್ ಮಹಲ್‌ನ ಅಜಯ್, ಮುಸ್ಸಂಜೆ ಮಾತಿನ ಸುದೀಪ್, ಬುದ್ಧಿವಂತದಿಂದ ಉಪೇಂದ್ರ ಹಾಗೂ ಮೊಗ್ಗಿನ ಮನಸು ಚಿತ್ರದಿಂದ ಯಶ್. ಅತ್ಯುತ್ತಮ ನಟಿ ಪ್ರಶಸ್ತಿಗೆ ಮೊಗ್ಗಿನ ಮನಸು ಚಿತ್ರದಿಂದ ರಾಧಿಕಾ ಪಂಡಿತ್, ಗಾಳಿಪಟದಿಂದ ಡೈಸಿ ಬೋಪಣ್ಣ, ತಾಜ್ ಮಹಲ್ ಚಿತ್ರದಿಂದ ಪೂಜಾ ಗಾಂಧಿ, ಮುಸ್ಸಂಜೆ ಮಾತು ಚಿತ್ರದಿಂದ ರಮ್ಯಾ ಹಾಗೂ ಹಾಗೆ ಸುಮ್ಮನೆ ಚಿತ್ರದಿಂದ ಸುಹಾಸಿ ಅತ್ಯುತ್ತಮ ನಟಿ ಪ್ರಶಸ್ತಿಗಾಗಿ ಕಣದಲ್ಲಿದ್ದರೂ, ರಾಧಿಕಾಗೆ ಪ್ರಶಸ್ತಿ ಒಲಿಯಿತು.
ಇತರ ಭಾಷೆಗಳು: ತಮಿಳಿನಲ್ಲಿ ಸುಬ್ರಹ್ಮಣ್ಯಪುರಂ ಚಿತ್ರ ಅತ್ಯುತ್ತಮ ಚಿತ್ರವಾದರೆ, ಅತ್ಯುತ್ತಮ ನಟ ನಟಿಯರಾಗಿ ಸೂರ್ಯ (ವಾರಣಂ ಆಯಿರಂ) ಹಾಗೂ ಪಾರ್ವತಿ ಮೆನನ್ (ಪೂ) ಆಯ್ಕೆಯಾದರು. ತೆಲುಗಿನಲ್ಲಿ ಗಮ್ಯಂ ಚಿತ್ರ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡರೆ, ಅತ್ಯುತ್ತಮ ನಟ ಹಾಗೂ ನಟಿಯರಾಗಿ ಅಲ್ಲು ಅರ್ಜುನ್ (ಪರುಗು) ಹಾಗೂ ಸ್ವಾತಿ (ಅಶ್ಟ ಚಮ್ಮ) ಆಯ್ಕೆಯಾದರು. ಮಳಯಾಳಂ ಭಾಷೆಯ ಅತ್ಯುತ್ತಮ ಚಿತ್ರವಾಗಿ ತಿರಕ್ಕದ, ಅತ್ಯುತ್ತಮ ನಟ ಹಾಗೂ ನಟಿಯರಾಗಿ ಲಾಲ್ (ತಲಪ್ಪಾವು) ಹಾಗೂ ಪ್ರಿಯಮಣಿ (ತಿರಕ್ಕದ) ಪಡೆದುಕೊಂಡರು.
MOKSHA
56ನೇ ದಕ್ಷಿಣ ಭಾರತೀಯ ಐಡಿಯಾ ಫಿಲಂಫೇರ್ ಪ್ರಶಸ್ತಿ ಪ್ರದಾನ-2008 ವಿಜೇತರ ಪಟ್ಟಿ ಇಂತಿದೆ.
ವಿಜೇತರು- ಗಣೇಶ್ ಹಾಗೂ ರಾಧಿಕಾ ಪಂಡಿತ್.
ಅತ್ಯುತ್ತಮ ಚಿತ್ರ- ಮೊಗ್ಗಿನ ಮನಸು ಅತ್ಯುತ್ತಮ ನಿರ್ದೇಶಕ- ಶಶಾಂಕ್ (ಮೊಗ್ಗಿನ ಮನಸು)
ಅತ್ಯುತ್ತಮ ನಟ- ಗಣೇಶ್ (ಗಾಳಿಪಟ) ಅತ್ಯುತ್ತಮ ನಟಿ- ರಾಧಿಕಾ ಪಂಡಿತ್ (ಮೊಗ್ಗಿನ ಮನಸು)
ಅತ್ಯುತ್ತಮ ಪೋಷಕ ನಟ- ಯಶ್ (ಮೊಗ್ಗಿನ ಮನಸು) ಅತ್ಯುತ್ತಮ ಪೋಷಕ ನಟಿ- ಶುಭಾ ಪೂಂಜಾ (ಮೊಗ್ಗಿನ ಮನಸು)
ಅತ್ಯುತ್ತಮ ಸಂಗೀತ- ಹರಿಕೃಷ್ಣ (ಗಾಳಿಪಟ) ಅತ್ಯುತ್ತಮ ಗೀತ ಸಾಹಿತ್ಯ- ಜಯಂತ ಕಾಯ್ಕಿಣಿ ( ಮಿಂಚಾಗಿ ನೀನು ಬರಲು- ಗಾಳಿಪಟ)
ಅತ್ಯುತ್ತಮ ಹಿನ್ನೆಲೆ ಗಾಯಕ- ಸೋನು ನಿಗಂ ( ಏನಾಗಲಿ ಮುಂದೆ ಸಾಗು ನೀ- ಮುಸ್ಸಂಜೆ ಮಾತು) ಅತ್ಯುತ್ತಮ ಹಿನ್ನೆಲೆ ಗಾಯಕಿ- ಶ್ರೇಯಾ ಘೋಷಾಲ್ (ನಿನ್ನ ನೋಡಲೆಂತು- ಮುಸ್ಸಂಜೆ ಮಾತು)