'ಮೊಗ್ಗಿನ ಮನಸು' ಚಿತ್ರಕ್ಕೆ ಐದು ಫಿಲಂಫೇರ್ ಪ್ರಶಸ್ತಿಗಳು ಬಂದಿರುವ ಹುರುಪಿನಲ್ಲಿ ನಿರ್ದೇಶಕ ಶಶಾಂಕ್ ಇದೀಗ ಮತ್ತೊಂದು ನಿರ್ದೇಶನಕ್ಕೆ ಅಣಿಯಾಗುತ್ತಿದ್ದಾರೆ.
ಹೊಸ ಚಿತ್ರದ ಹೆಸರು 'ಕೃಷ್ಣನ್ ಲವ್ ಸ್ಟೋರಿ'. ಫುಲ್ ಫೀಲಿಂಗ್ ಮಗಾ - ಇದು ಚಿತ್ರದ ಟ್ಯಾಗ್ ಲೈನ್. ಚಿತ್ರಕ್ಕೆ ಈಗಾಗಲೇ ನಾಯಕನ ಆಯ್ಕೆಯಾಗಿದೆ. ಅಜಯ್ ಚಿತ್ರದ ನಾಯಕ.
MOKSHA
ನಾಯಕಿ ಮತ್ತಿತರ ತಾರಾಗಣ, ತಂತ್ರಜ್ಞರ ಆಯ್ಕೆ ಪ್ರಕ್ರಿಯೆ ಇನ್ನು ಅಂತಿಮವಾಗಿಲ್ಲ. ಫಿಲಂಫೇರ್ ಪ್ರಶಸ್ತಿ ವಿಜೇತ ನಟಿ ರಾಧಿಕಾ ಪಂಡಿತ್ರನ್ನೇ ಮತ್ತೆ ನಾಯಕಿಯಾಗಿ ಆರಿಸುವ ಸಾಧ್ಯತೆಗಳಿವೆ ಎಂದಿವೆ ಮೂಲಗಳು. ರಾವಣ ಚಿತ್ರ ನಿರ್ಮಿಸುತ್ತಿರುವ ಉದಯ್ ಕೆ. ಮೆಹ್ತಾ ಮತ್ತು ಮೋಹನ್ ನಾಯಕ್ ನಿರ್ಮಾಪಕರು.
ಅಂದುಕೊಂಡಿದ್ದಂತೆ ಎಲ್ಲವೂ ನಡೆಯುತ್ತಿದ್ದರೆ ಶಶಾಂಕ್ ಈಗಾಗಲೇ ಎರಡು ಚಿತ್ರಗಳನ್ನು ನಿರ್ದೇಶಿಸಿ ತೆರೆಗೆ ತರಬೇಕಿತ್ತು. ಆದರೆ ಮೊಗ್ಗಿನ ಮನಸು ಬಿಡುಗಡೆಯಾದ ಬಳಿಕ ನಿರ್ಮಾಪಕರ ಸಮಸ್ಯೆಗಳಿಂದ ಚಿತ್ರ ನಿರ್ದೇಶನ ಸ್ಥಗಿತಗೊಂಡಿತ್ತು.
ಇದೀಗ ಮೂರನೇ ನಿರ್ಮಾಪಕರ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. 'ಈ ಬಾರಿ ಹಾಗಾಗಲ್ಲ ಅಂತ ಅಂದುಕೊಂಡಿದ್ದೇನೆ. ಚಿತ್ರ ಸುಸೂತ್ರವಾಗಿ ನಡೆಯಲಿದೆ' ಎನ್ನುತ್ತಾರೆ ನಿರ್ದೇಶಕ ಶಶಾಂಕ್. ಎಲ್ಲವೂ ಅಂದುಕೊಂಡಂತೆ ಆದರೆ ಅಕ್ಟೋಬರ್ ಮೊದಲ ವಾರದಲ್ಲಿ ಚಿತ್ರೀಕರಣ ಆರಂಭವಾಗಲಿದೆ.