ನಾಯಕಿಯಾಗಬೇಕೆಂದು 'ಮುಸ್ಸಂಜೆಯ ಗೆಳತಿ'ಯಾಗಿ ಅಪ್ಪನೊಂದಿಗೆ ಬಂದ ಶಾಲಿನಿ ಇನ್ನೂ ಮೂರು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ಅಪ್ಪ-ಮಗಳು ನಾಯಕ-ನಾಯಕಿಯಾಗಿ ನಟಿಸಿದ ವಿಕ್ಷಿಪ್ತ ಚಿತ್ರ 'ಮುಸ್ಸಂಜೆ ಗೆಳತಿ' ಇನ್ನಷ್ಟೇ ಬಿಡುಗಡೆಯ ಭಾಗ್ಯ ಕಾಣಬೇಕಿದೆ.
MOKSHA
ಇದು ಸತ್ಯ ಎನ್ನುತ್ತಾರೆ ಶಾಲಿನಿಯವರ ತಂದೆ ಬಿ.ಪಿ. ಶ್ರೀನಿವಾಸ್. ಅವರ ಸಂಸ್ಥೆಯಡಿಯೇ ನಿರ್ಮಾಣವಾಗುತ್ತಿರುವ ಈ ಮೂರು ಚಿತ್ರಗಳಲ್ಲಿ ಮೊದಲನೆಯದು 'ಹರಿಶ್ಚಂದ್ರ ಘಾಟ್'. ಒಂದುವರೆ ವರ್ಷಗಳ ಹಿಂದೆಯೇ ಪ್ರಾರಂಭವಾದ ಚಿತ್ರವಿದು. ಆದರೆ ಇದ್ದಕ್ಕಿದ್ದಂತೆ ನಿಂತು ಹೋದ ಚಿತ್ರವನ್ನು ಪುನಃ ಶುರು ಮಾಡಲು ಯೋಚಿಸುತ್ತಿದ್ದಾರೆ ಶ್ರೀನಿವಾಸ್. ಚಿತ್ರದ ಶೂಟಿಂಗ್ ಅಗಸ್ಟ್ 15ರಿಂದ ಪುನರಾರಂಭವಾಗಲಿದೆ.
ಈ ಚಿತ್ರಕ್ಕೆ ನಾಯಕನಾಗಿ ಗಂಗಾ ಕಾವೇರಿ ಖ್ಯಾತಿಯ ಅರ್ಜುನ್ ಆಯ್ಕೆಯಾಗಿದ್ದಾರೆ. ಚಿತ್ರದ ನಿರ್ದೇಶನವನ್ನು ಶ್ರೀನಿವಾಸ್ ಅವರೇ ಮಾಡಲಿದ್ದಾರೆ.
ಇನ್ನು ಮುಂದಿನ ಚಿತ್ರ 'ಯಾರು ಹಿತವರು ಈ ಮೂವರೊಳಗೆ' ಹಾಗೂ 'ಬ್ಲಾಕ್ ಫಾರೆಸ್ಟ್'. ಮೊದಲ ಚಿತ್ರಕ್ಕೆ ಶ್ರೀನಿವಾಸ್ ಬರೀ ನಿರ್ಮಾಪಕರು. ಚಿತ್ರವನ್ನು ಹಿರಿಯ ನಿರ್ದೇಶಕ ಡಿ. ರಾಜೇಂದ್ರ ಬಾಬು ನಿರ್ದೇಶಿಸುವ ಕುರಿತು ಸುದ್ದಿ ಬಂದಿದೆ.
ಬ್ಲಾಕ್ ಫಾರೆಸ್ಟ್ ಚಿತ್ರವನ್ನು ಮಾರಿಷಸ್ ಕಾಡುಗಳಲ್ಲಿ ಚಿತ್ರೀಕರಣ ಮಾಡಲು ಶ್ರೀನಿವಾಸ್ ಉದ್ದೇಶಿಸಿದ್ದಾರೆ. ಅಲ್ಲಿಗೆ 'ಮುಸ್ಸಂಜೆ ಗೆಳತಿ'ಯ ಕನಸು ನನಸಾಗುವ ಹಾಗಿದೆ.