ಕುಮಾರ್ ಬಂಗಾರಪ್ಪ ಮತ್ತೆ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಚುನಾವಣೆ ಬಳಿಕ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ದ ಕುಮಾರ್ ಬಂಗಾರಪ್ಪ ಇದೀಗ ಬಣ್ಣ ಹಚ್ಚಲು ಸಿದ್ಧತೆ ನಡೆಸುತ್ತಿದ್ದಾರೆ.
MOKSHA
ಎಲೆಕ್ಷನ್ ಎಲ್ಲಾ ಮುಗಿದ ಮೇಲೆ ಖಂಡಿತ ನಟಿಸುತ್ತೇನೆ ಎಂದು 'ರಕ್ತ ಕಣ್ಣೀರು' ಚಿತ್ರದ ನಂತರ ಹೇಳುತ್ತಲೇ ದಿನ ದೂಡುತ್ತಿದ್ದರು. ಈಗ ಅದೇ ಕುಮಾರ್ ಮತ್ತೊಮ್ಮೆ ಅಶ್ವಮೇಧ ಯಾಗ ಮಾಡಲು ಮುಂದಾಗಿದ್ದಾರೆ. ನಾಗಾಭರಣ ನಿರ್ದೇಶನದ ಒಂದು ಐತಿಹಾಸಿಕ ಚಿತ್ರಕ್ಕೆ ಕುಮಾರ್ ತಾಲೀಮು ನಡೆಸುತ್ತಿದ್ದಾರೆ.
ಇದರ ಕತೆ ಸಂಬಂಧಿಸಿದಂತೆ ನಾಗಾಭರಣ ಕಳೆದ ಎರಡು ವರ್ಷಗಳಿಂದ ಸಿದ್ಧತೆ ನಡೆಸುತ್ತಾ ಬಂದಿದ್ದರು. ಇದರ ಸಂಪೂರ್ಣ ಮಾಹಿತಿ ನವೆಂಬರ್ ಒಂದರಂದು ತಿಳಿಯಲಿದೆ ಎನ್ನುತ್ತಾರೆ ಕುಮಾರ್. ಇನ್ನೊಂದು ವಿಷಯ. ಕುಮಾರ್ ಈಗ ಹೊಸ ಲುಕ್ನಲ್ಲಿದ್ದಾರೆ. ಹೇರ್ ಸ್ಟೈಲ್ ಬದಲಾಗಿದೆ. ಇದು ಚಿತ್ರಕ್ಕಾಗಿಯೇ ಎಂಬುದು ತಿಳಿದಿಲ್ಲ. ಉತ್ತರಕ್ಕಾಗಿ ನವಂಬರ್ವರೆಗೆ ಕಾಯಬೇಕು.