ಫುಲ್ಹೌಸ್ ಆದ ಹೌಸ್ಫುಲ್
ನಿರ್ದೇಶಕ ಹೇಮಂತ್ ಹೆಗಡೆ ಫುಲ್ ಖುಷಿಯಲ್ಲಿದ್ದಾರೆ. ಕಾರಣ, ಜನರೆಲ್ಲ ತನ್ನ ಹೌಸ್ ಬಿಟ್ಟು ಥಿಯೇಟರ್ಗೆ ಬಂದು ಥಿಯೇಟರ್ ಫುಲ್ ಆಗಿರುವುದಕ್ಕೆ ನಿರ್ದೇಶಕರು ನಿರಾಳವಾಗಿದ್ದಾರೆ.ಹೌದು. ಇದು ಹೌಸ್ಫುಲ್ ಚಿತ್ರದ ವಿಷಯ. ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಬಂದಿದೆ ಎನ್ನುವುದು ಅವರ ಅಭಿಪ್ರಾಯ. ಬೆಂಗಳೂರು ಮಾತ್ರವಲ್ಲದೆ, ಮೈಸೂರು, ದಾವಣಗೆರೆಯಲ್ಲೂ ಬೆಳಗಿನ ಆಟವೇ ಶೇ 80ರಷ್ಟು ತುಂಬಿರುತ್ತದೆ. ಹಳ್ಳಿಗಳಲ್ಲೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ ಎನ್ನುತ್ತಾರೆ ಅವರು.ಚಿತ್ರದ ಕಾಮಿಡಿಯೇ ಚಿತ್ರದ ಯಶಸ್ಸಿಗೆ ಕಾರಣ ಎನ್ನುವುದು ಅವರ ಅಂಬೋಣ. ಜನ 100 ಪರ್ಸೆಂಟ್ ಕಾಮಿಡಿ ಕೊಟ್ಟರೆ ಖಂಡಿತ ಮೋಸ ಮಾಡುವುದಿಲ್ಲ. ಗೆಲ್ಲಲು ಕೆಲ ದಿನವಾದರೂ ಬೇಕಾಗಬಹುದು. ಮೊದಲ ವಾರದಲ್ಲಿ ನಿರ್ಮಾಪಕರು ಗಾಬರಿಯಾಗಿದ್ದರು. ಆದರೆ ಈಗ ಹ್ಯಾಪಿಯಾಗಿದ್ದಾರೆ. ಚಿತ್ರ ಶತದಿನ ಪೂರೈಸುವುದಂತೂ ಗ್ಯಾರಂಟಿ ಎನ್ನುತ್ತಾರೆ ಹೇಮಂತ್.