ಒಂದೇ ಚಿತ್ರವನ್ನು ನಾಲ್ವರು ನಿರ್ದೇಶಕರು ನಿರ್ದೇಶನ ಮಾಡುವ ಮೂಲಕ ಇಂದ್ರಜಿತ್ ನಿರ್ಮಿಸಿದ್ದ ದಾಖಲೆಯನ್ನು ಇದೀಗ ಬಿ. ರಾಮಮೂರ್ತಿ ಮುರಿದಿದ್ದಾರೆ.
ಉಪೇಂದ್ರ, ಮಾಸ್ಟರ್ ಕಿಶನ್, ಓಂ ಪ್ರಕಾಶ್ ರಾಜ್, ಸಾಧುಕೋಕಿಲ ಹೀಗೆ ನಾಲ್ವರ ನಿರ್ದೇಶನದಲ್ಲಿ ಐಶ್ವರ್ಯ ಚಿತ್ರ ಮೂಡಿ ಬಂದಿತ್ತು. ಇದರ ಹಿಂದೆ ಇಂದ್ರಜಿತ್ ಪರಿಶ್ರಮ ಎಲ್ಲರಿಗೂ ಗೊತ್ತೇ ಇದೆ. ಇದೀಗ ರಾಮಮೂರ್ತಿಯವರ ನಿರ್ದೇಶನದ 50ನೇ ಚಿತ್ರದಲ್ಲಿ ಒಟ್ಟು ಆರು ಕಲಾವಿದರು ಹಾಗೂ ನಿರ್ದೇಶಕರನ್ನು ಕಲೆ ಹಾಕಿ ನಿರ್ದೇಶಿಸಿದ್ದಾರೆ.
ಹೌದು. ಅವರ ಹೊಸ ಚಿತ್ರ ಹೇ ಸರಸೂ ಚಿತ್ರದಲ್ಲಿ ಆರು ಮಂದಿ ನಿರ್ದೇಶಕರಿದ್ದಾರೆ. ರಮೇಶ್ ಅರವಿಂದ್, ಜೋಸೈಮನ್, ಶಿವರಾಮ್, ಸತ್ಯಜಿತ್, ಜೈಜಗದೀಶ್. ಇವರಲ್ಲಿ ರಮೇಶ್ ಮತ್ತು ಜೋಸೈಮನ್ ನಿರ್ದೇಶಕರಾಗಿಯೂ ಹೆಸರು ಮಾಡಿದ್ದಾರೆ. ಮಿಕ್ಕಂತೆ ಶಿವರಾಮ್, ಸತ್ಯಜಿತ್, ಜೈಜಗದೀಶ್ ನಟರಾಗಿ ಹೆಚ್ಚು ಹೆಸರು ಮಾಡಿದ್ದಾರೆ. ಜೊತೆಗೆ ಆಗಾಗ ನಿರ್ದೇಶನಕ್ಕೂ ಕೈ ಹಾಕಿದ್ದರು. ಅಂದ ಹಾಗೆ ಇನ್ನೊಂದು ಮುಖ್ಯವಾದ ವಿಷಯ. ಚಿತ್ರಕ್ಕೆ ಆರು ನಿರ್ದೇಶಕರಿದ್ದರೂ, ಈ ಚಿತ್ರ ಮಲಯಾಳಂನ ಚಂದ್ರಲೇಖ ಚಿತ್ರದ ರೀಮೇಕ್ ಎಂಬುದನ್ನು ಮಾತ್ರ ಮರೆಯಬೇಡಿ.