ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ದಯವಿಟ್ಟು ಖಾಸಗಿ ವಿಷಯ ಬರೆಯಬೇಡಿ- ಶುಭಾ ಪೂಂಜಾ (Shubha Punja | Vijay | Moggina Manasu)
ಸುದ್ದಿ/ಗಾಸಿಪ್
Feedback Print Bookmark and Share
 
Shubha Punja
MOKSHA
ಉತ್ತಮ ಪೋಷಕ ನಟಿ ಪ್ರಶಸ್ತಿ ಪಡೆದಿರುವ ಶುಭಾ ಪೂಂಜಾ ಇದೀಗ ಡಬಲ್ ಖುಷಿಯಲ್ಲಿದ್ದಾರೆ. ಪ್ರಶಸ್ತಿಯ ಹಿಂದೆಯೇ ಹಲವಾರು ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದಿರುವುದೇ ಈ ಸಂತಸಕ್ಕೆ ಕಾರಣ.

ಇದರ ಜೊತೆಗೆ ಇವರಿಗೆ ಬೇಸರವೂ ಇದೆ. ಮಾಧ್ಯಮದವರು ವೈಯಕ್ತಿಕ ವಿಚಾರಗಳ ಬಗ್ಗೆಯೇ ಬರೆಯುವುದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಾರೆ ಶುಭಾ ಪೂಂಜಾ. ಅದರಲ್ಲೂ ನನಗೂ ವಿಜಯ್‌ಗೂ ಸಂಬಂಧ ಕಲ್ಪಿಸಿ ಬರೆಯುತ್ತಾರೆ. ಇದು ನನಗೆ ತುಂಬ ಬೇಜಾರು ತರಿಸಿದೆ ಎನ್ನುತ್ತಾರೆ ಅವರು.

ಪ್ರತಿ ಬಾರಿಯೂ, ವಿಜಯ್ ನನಗೆ ಬೆಸ್ಟ್ ಫ್ರೆಂಡ್ ಎಂದು ಸ್ಪಷ್ಟೀಕರಣ ನೀಡಿ ನೀಡಿ ಬೇಜಾರಾಗಿದೆ. ಇನ್ನು ಮುಂದೆ ಆ ವಿಷಯದ ಬಗ್ಗೆ ಮಾತನಾಡಬಾರದು ಎಂದು ನಿರ್ಧರಿಸಿದ್ದೇನೆ. ಸೆಲಿಬ್ರಿಟಿಗಳು ಜೊತೆಯಲ್ಲಿ ಕುಳಿತು ಮಾತನಾಡುವುದು, ಊಟ ಮಾಡುವುದು ತಪ್ಪು ಎಂದು ಗ್ರಹಿಸಿದರೆ ಹೇಗೆ? ಸಿನಿಮಾ ತಾರೆ ಎಲ್ಲಿಗೂ ಹೋಗಬಾರದು ಎಂದು ಬೇರೆಯವರು ನಿರ್ಧರಿಸುವುದು ತಪ್ಪು ಎನ್ನುತ್ತಾರೆ ಅವರು.

ನನ್ನ ವೈಯಕ್ತಿಕ ವಿಷಯಗಳ ಬಗ್ಗೆ ಯಾರದರೂ ಬರೆದಾಗ ತುಂಬಾ ನೋವಾಗುತ್ತದೆ. ಬರೆಯುದಕ್ಕೂ ಮುನ್ನ ಅದು ನಿಜವೇ ಸುಳ್ಳೊ ಎಂದು ಯೋಚಿಸಿ ಬರೆಯಬೇಕು ಎಂದು ಸಲಹೆ ನೀಡುತ್ತಾರೆ ಶುಭಾ ಪೂಂಜಾ. ಕೊನೆಗೆ, ಇದು ಸುಳ್ಳೊ ನಿಜವೋ ಮಾತ್ರ ಕೇಳಬೇಡಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶುಭಾ ಪೂಂಜಾ, ವಿಜಯ್, ಮೊಗ್ಗಿನ ಮನಸು