ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಂಗೆ ಮದ್ವೆನಾ? ಯಾರು ಹೇಳಿದ್ದು?- ಛಾಯಾಸಿಂಗ್ (Chaya Singh | Celebrity Marriage | Gandhi Bazar)
ಸುದ್ದಿ/ಗಾಸಿಪ್
Feedback Print Bookmark and Share
 
Chaya Singh
MOKSHA
'ಛಾಯಾಸಿಂಗ್‌ಗೆ ಮದ್ವೆಯಂತೆ' ಎಂದು ಮಾಧ್ಯಮಗಳಲ್ಲೆಲ್ಲ ಸುದ್ದಿಯಾದುದು ನಿಜ. ಇತ್ತೀಚೆಗಷ್ಟೆ ಶ್ರೀದೇವಿ, ಮೀನಾ ಮದುವೆಯಾದ ನಂತರ ಆ ಸಾಲಿಗೆ ಛಾಯಾ ಸಿಂಗ್ ಸೇರಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾದುದೂ ಅಷ್ಟೇ ನಿಜ. ಆದರೆ, ಮದುವೆಯಂತೆ ಎಂದು ಸುದ್ದಿಯಾದರೂ, ಈಗ ಮಾತ್ರ ಛಾಯಾಸಿಂಗ್ ರಾಗ ಬದಲಿಸಿದ್ದಾರೆ. ಮದ್ವೆನಾ? ನಂಗಾ? ಯಾರು ಹೇಳಿದ್ದು ಅಂತ ತನಗೆ ಗೊತ್ತೇ ಇಲ್ಲ ಎಂಬಂತೆ ಹೇಳುತ್ತಿದ್ದಾರೆ.

'ಮಾಧ್ಯಮಗಳಲ್ಲೆಲ್ಲೂ ಸುದ್ದಿ ಓದಿ ನನಗೇ ಆಶ್ಚರ್ಯವಾಯ್ತು. ನಾನು ಮದುವೆಯಾಗುತ್ತಿದ್ದೇನಾ? ಯಾವಾಗ? ಯಾರು ಆ ಹುಡುಗ? ಆತ ಏನು ಮಾಡುತ್ತಿದ್ದಾನೆ?' ಎಂದು ಛಾಯಾಸಿಂಗ್ ಮಾಧ್ಯಮಗಳಿಗೇ ಮರುಪ್ರಶ್ನೆ ಹಾಕಿದ್ದಾರೆ.

'ಸದ್ಯ ನಾನೀಗ ತುಂಬ ಬ್ಯುಸಿ. ಝೀ ಕನ್ನಡ ಚಾನಲ್‌ನ ಮಕ್ಕಳ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಪಾಲ್ಗೊಳ್ಳುತ್ತಿರುವುದರಿಂದ ಅದರಲ್ಲೇ ಬ್ಯುಸಿಯಾಗಿದ್ದೇನೆ. ಜತೆಗೆ ಮಲಯಾಳಂ ಸಿನಿಮಾದಲ್ಲಿ ನಟಿಸಲು ಸಹಿ ಹಾಕಿದ್ದೇನೆ. ಜತೆಗೆ ಬೆಂಗಾಲಿಯಿಂದ ಕೆಲವು ಆಫರ್‌ಗಳಿಗೆ ಒಪ್ಪಿಗೆ ಸೂಚಿಸಿದ್ದೇನೆ. ಹಾಗಾಗಿ ನಾನಿಗ ತುಂಬ ಬ್ಯುಸಿ. ಹಾಗಾಗಿ ಮದುವೆಯಾಗಲು ಸಮಯವೇ ಇಲ್ಲ' ಎನ್ನುತ್ತಾರೆ ಛಾಯಾ.

ಹಾಗಾದರೆ ಮದುವೆ ಎಂಬುದು ನಿಮ್ಮ ಪಟ್ಟಿಯಲ್ಲಿ ಸದ್ಯ ಇಲ್ಲವೇ? ಎಂದು ಕೇಳಿದರೆ, 'ಖಂಡಿತ ಇಲ್ಲ. ನಾನು ಚಿತ್ರರಂಗದಲ್ಲಿ ಸಾಕಷ್ಟು ಸಾಧಿಸೋದಕ್ಕಿದೆ. ಜತೆಗೆ ಈಗಾಗಲೇ ಒಪ್ಪಿಕೊಂಡ ಜವಾಬ್ದಾರಿಗಳನ್ನಾದರೂ ಮುಗಿಸಬೇಕಿದೆ. ತಮಿಳಿನ ಅಂತಃಪುರತು ವೀಡು ಚಿತ್ರವನ್ನೂ ಮುಗಿಸಬೇಕಿದೆ. ಹಾಗಾಗಿ ಮದುವೆ ಎಂಬುದು ಸದ್ಯಕ್ಕೆ ನನ್ನ ಲಿಸ್ಟ್‌ನಲ್ಲಿಲ್ಲ' ಎನ್ನುತ್ತಾರೆ.

ಹಾಗಾದರೆ ಸುದ್ದಿಯಾದಂತೆ ನಿಮ್ಮದು ಅರೇಂಜ್ ಮ್ಯಾರೇಜಾ? ಎಂದರೆ, 'ನನ್ನ ಮದುವೆ ಬಗ್ಗೆ ಅಪ್ಪ, ಅಮ್ಮ ಜವಾಬ್ದಾರಿ ಹೊತ್ತುಕೊಳ್ಳುತ್ತಾರೆ. ನನ್ನ ಜೀವನದಲ್ಲಿ ನನ್ನನ್ನು ಸರಿಯಾಗಿ ಅರ್ಥಮಾಡಿಕೊಳ್ಳಬಲ್ಲ ಸೂಕ್ತ ವ್ಯಕ್ತಿಗಾಗಿ ಕಾಯುತ್ತಿದ್ದೇನೆ. ಸದ್ಯಕ್ಕಂತೂ ನನ್ನ ಬದುಕಿನಲ್ಲಿ ಯಾರೂ ಅಂಥ ಪುರುಷರಿಲ್ಲಪ್ಪ' ಎನ್ನುತ್ತಾರೆ ಛಾಯಾ. ಹಾಗಾದರೆ ಛಾಯಾಸಿಂಗ್ 'ಗಾಂಧಿಬಜಾರ್' ಎಂಬ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ ಎಂಬ ಸುದ್ದಿಯಿತ್ತಲ್ಲ, ಅದು ಅಲ್ಲಿವರೆಗೆ ಬಂತು? ಎಂದರೆ, 'ಸದ್ಯಕ್ಕೆ ಚಿತ್ರ ನಿರ್ದೇಶಿಸುವ ಕನಸು ಹಾಗೆಯೇ ಇದೆ ನಿರ್ಮಾಪಕರು ಯಾರೂ ಹಣ ಹೂಡಲು ಸಿದ್ಧರಿಲ್ಲ. ಏನು ಮಾಡೋದು' ಎಂದು ಬೇಸರಿಸುತ್ತಾರೆ ಛಾಯಾ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಛಾಯಾ ಸಿಂಗ್, ಗಾಂಧಿ ಬಜಾರ್, ಮನ್ಮದರಸಾ, ಕನ್ನಡ ಸಿನಿಮಾ