ಅಂತಿಮ ಹಂತದಲ್ಲಿ ಹೋರಿ
ವಿನೋದ್ ಪ್ರಭಾಕರ್ ಅಭಿನಯದ ಹೋರಿ ಚಿತ್ರ ಅಂತೂ ಅಂತಿಮ ಹಂತ ತಲುಪಿದೆ. ಈಗಾಗಲೇ ಬೆಂಗಳೂರು ಸುತ್ತಮುತ್ತ ಸತತವಾಗಿ ಚಿತ್ರೀಕರಿಸಿದ್ದು, ಎರಡು ಸಾಹಸ ದೃಶ್ಯಗಳನ್ನು ಮುಗಿಸಿ ಮೈಸೂರಿನಲ್ಲಿ ಬಾಕಿ ಉಳಿದ ಚಿತ್ರೀಕರಣವನ್ನು ಮುಗಿಸಲು ಚಿತ್ರತಂಡ ನಿರ್ಧರಿಸಿದೆ.ಚಿತ್ರವನ್ನು ನಾಗೇಂದ್ರ ಮಾಗಡಿ ನಿರ್ದೇಶಿಸಿದ್ದಾರೆ. ಭಕ್ತಿ ಪ್ರಧಾನ, ಹಾಸ್ಯ ಹೀಗೆ ಎಲ್ಲಾ ರಂಗದಲ್ಲಿಯೂ ಕೈಯಾಡಿಸಿರುವ ಇವರು ಇದೀಗ ಆಕ್ಷನ್, ಕಾಮಿಡಿ ಜೊತೆಗೆ ಪ್ರೀತಿಯ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನಾಯಕ ವಿನೋದ್ ಪ್ರಭಾಕರ್ ಚಿತ್ರದ ಮೇಲೆ ಭಾರಿ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಇದು ಅವರ ವೃತ್ತಿ ಜೀವನಕ್ಕೆ ಹಾದಿ ಮಾಡಿಕೊಡಲಿದೆ ಎಂಬುದು ಅವರ ಅನಿಸಿಕೆ. ಚಿತ್ರದಲ್ಲಿ ಗೌರಿ ಮುಂಜಾಲ್ ನಾಯಕಿ. ಇವರೊಂದಿಗೆ ರಮಣೀತೋ ಚೌಧರಿ ಇದ್ದಾರೆ. ಚಿತ್ರಕ್ಕೆ ಎಂ.ಆರ್. ಸೀನು ಛಾಯಾಗ್ರಹಣ ಮಾಡಿದ್ದಾರೆ. ಚಿತ್ರವನ್ನು ಲಿಂಗೇಗೌಡರು ನಿರ್ಮಿಸಿದ್ದಾರೆ. ಚಿತ್ರವನ್ನು ಶೀಘ್ರದಲ್ಲಿ ತೆರೆಗೆ ತರಲು ಯೋಜಿಸಿದ್ದಾರೆ ನಿರ್ದೇಶಕರು.