ಸುಮಾರು ಒಂದು ವರ್ಷದ ಹಿಂದೆ ಚಿತ್ರೀಕರಣದ ಸಂದರ್ಭದಲ್ಲಿ ನಡೆದ ಅಪಘಾತದಲ್ಲಿ ಕಾಲನ್ನು ಮುರಿದುಕೊಂಡಿದ್ದ ಸರಿಗಮ ವಿಜಿ ಇದೀಗ ಚೇತರಿಸಿಕೊಂಡು ಗಾಂಧಿನಗರಕ್ಕೆ ಮರಳಿದ್ದಾರೆ.
ಅಷ್ಟೇ ಅಲ್ಲ, ಸಹಾಯಕ ನಿರ್ದೇಶಕರಾಗಿ ವಾಪಸ್ಸಾಗಿದ್ದಾರೆ. ಓಂ ಪ್ರಕಾಶ್ ರಾವ್ ನಿರ್ದೇಶನದ ಎ.ಕೆ. 56 ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಲಿದ್ದಾರೆ. ಇದಕ್ಕೂ ಮೊದಲು ಕಿರಣ್ಬೇಡಿ ಚಿತ್ರೀಕರಣದಲ್ಲಿ ವಿಜಿ ಕೆಲಸ ಮಾಡಿದ್ದರು. ಈಗ ಅದೇ ಓಂ ಮತ್ತೆ ತಮ್ಮ ಸ್ನೇಹಿತನನ್ನು ಕರೆದು ಕೆಲಸ ಕೊಟ್ಟಿದ್ದಾರೆ.
ಅದೆಲ್ಲ ಹಾಗಿರಲಿ. ಅವರ ಕಾಲು ಸರಿ ಮಾಡಿಸುವುದಕ್ಕೆ ವಿಜಿ ಅವರಿಗೆ ಖರ್ಚಾಗಿದ್ದು ಆರು ಲಕ್ಷವಂತೆ. ಅದಕ್ಕೆ ಕಿರಣ್ ಬೇಡಿ ನಿರ್ಮಾಪಕರಾದ ರಾಮು ಮೂರು ಲಕ್ಷ ಸಹಾಯ ಮಾಡಿದ್ದರಂತೆ. ಮಿಕ್ಕ ಮೂರು ಲಕ್ಷ ನೀಡಿ ವಿಜಿ ಮರಳಿ ಸೆಟ್ಟಿಗೆ ಬಂದಿದ್ದಾರೆ.