ಇದು ಪೊಲೀಸ್ ಪವರ್ ಕತೆ. 1968, 1992 ಮತ್ತು 2009- ಈ ಮೂರು ಹಂತಗಳಲ್ಲಿ ಮೂಡಿ ಬರುತ್ತಿರುವ ಚಿತ್ರ ಪೊಲೀಸ್ ಕ್ವಾರ್ಟಸ್. ಜತೆಗೆ ಅಲ್ಲಿ ನಡೆದ ಒಂದು ಪ್ರೇಮಕತೆಯನ್ನು ಬಿಚ್ಚಿಡುತ್ತದೆ ಈ ಚಿತ್ರ.
ಸೈನೈಡ್ ರಮೇಶ್ ನಿರ್ದೇಶನದ ಈ ಚಿತ್ರದ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದ್ದು, ಸದ್ಯ ಸಂಕಲನ ಕಾರ್ಯ ನಡೆಯುತ್ತಿದೆ. ಸತತ ನಲವತ್ತು ದಿನ ಒಂದು ಪೊಲೀಸ್ ಕ್ವಾರ್ಟಸ್ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಇದನ್ನು ಕನ್ನಡ, ತಮಿಳು ಭಾಷೆಗಳಲ್ಲಿ ಚಿತ್ರಕರಣವಾಗುತ್ತದೆ. ಅಲ್ಲದೆ, ಇದು ಮೂರು ಹಂತಗಳಲ್ಲಿ ಚಿತ್ರೀಕರಣ ಆಗಬೇಕಾಗಿರುವುದರಿಂದ ಆಗಾಗ ಅಷ್ಟಷ್ಟು ರೂಪುರೇಷೆ ಬದಲಾಯಿಸಿಕೊಳ್ಳಲಾಗಿದೆ ಎನ್ನುತ್ತಾರೆ ರಮೇಶ್.
ಈ ಚಿತ್ರವನ್ನು ಅಂದು ನಡೆದ ಹತ್ಯಾಕಾಂಡದಲ್ಲಿ ವೀರ ಮರಣ ಹೊಂದಿದ ಪೊಲೀಸರಿಗೆ ಅರ್ಪಿಸುತ್ತಿದ್ದಾರೆ ರಮೇಶ್. ಚಿತ್ರದಲ್ಲಿ ಅನಿಷ್ ಮತ್ತು ಸೋನು ಪ್ರಮುಖ ತಾರಾಗಣದಲ್ಲಿದ್ದಾರೆ. ನಮ್ ಏರಿಯಾದಲ್ಲಿ ಒಂದಿನಾ ಚಿತ್ರದಲ್ಲಿ ನಟಿಸಿದ್ದ ಅನಿಷ್ಗೆ ಇದೊಂದು ಹೊಸ ಅನುಭವ ಎನ್ನುತ್ತಾರೆ. ಇನ್ನು ಸೋನು ಬ್ರೇಕ್ ನಿರೀಕ್ಷೆಯಲ್ಲಿದ್ದಾರೆ. ಅಂದಹಾಗೆ ಚಿತ್ರ ಅಕ್ಟೋಬರ್ ಹೊತ್ತಿಗೆ ತೆರೆ ಕಾಣುವ ನಿರೀಕ್ಷೆ ಇದೆ.