ಲಗೋರಿ ಆಟ ಮತ್ತೆ ಪ್ರಾರಂಭವಾಗಿದೆ. ಯೋಗರಾಜ್ ಭಟ್ಟರು ಅರ್ಧಕ್ಕೆ ನಿಲ್ಲಿಸಿದ್ದ ಈ ಆಟವನ್ನು ಇದೀಗ ಸೂರಿ ಕೈಗೆತ್ತಿಕೊಂಡಿದ್ದಾರೆ.
ಹೌದು. ಈ ಚಿತ್ರವನ್ನು ಯೋಗರಾಜ್ ಭಟ್ಟರು ಈ ಹಿಂದೆಯೇ ನಿರ್ದೇಶಿಸಬೇಕಿತ್ತು. ಚಿತ್ರಕ್ಕೆ ಪುನೀತ್ ರಾಜ್ಕುಮಾರ್ ನಾಯಕನೆಂದು ಹೇಳಿಯೂ ಆಗಿತ್ತು. ಆದರೆ ಬಜೆಟ್ ಸಮಸ್ಯೆಯಿಂದಾಗಿ ನಿರ್ದೇಶನದಿಂದ ಹಿಂದೆ ಸರಿದರು. ಅಲ್ಲದೆ, ಚಿತ್ರ ನಿರ್ಮಾಣಕ್ಕೆ ರಾಕ್ಲೈನ್ ವೆಂಕಟೇಶ್ ಕೂಡ ಲೆಕ್ಕಚಾರ ಹಾಕತೊಡಗಿದಾಗ ಯೋಗರಾಜ್ ಭಟ್ಟರು ಕೈಚೆಲ್ಲಿ ಕುಳಿತರು.
MOKSHA
ಇದೀಗ ಅದೇ ಚಿತ್ರದಿಂದ ಬಿಸಿ ಬಿಸಿ ಸುದ್ದಿಯೊಂದು ಬಂದಿದೆ. ಲಗೋರಿ ಚಿತ್ರವನ್ನು ಸೂರಿ ನಿರ್ದೇಶನ ಮಾಡಲಿದ್ದಾರೆ. ಚಿತ್ರಕ್ಕೆ ಪುನೀತ್ ನಾಯಕರಾಗಿ ಮುಂದುವರೆದಿದ್ದಾರೆ. ಆದರೆ ಚಿತ್ರದ ಹೆಸರನ್ನು ಮಾತ್ರ ಬದಲಾಗಿದೆ. ಲಗೋರಿ ಹೋಗಿ ಇದೀಗ ಎಕ್ಕಾ ಆಗಿದೆ. ಆದರೆ ಅದಿನ್ನು ಅಂತಿಮವಲ್ಲ. ಯಾವುದಕ್ಕೂ ಪುನೀತ್ ಅಭಿನಯದ ರಾಜ್ ಚಿತ್ರದ ಬಿಡುಗಡೆ ಬಳಿಕ ಈ ಚಿತ್ರದ ಸುದ್ದಿ ಹೊರಬೀಳಲಿದೆ. ಅಂತೂ ಸೂರಿ ಕೈಯಲ್ಲಿ ಎಕ್ಕಾ ಏನಾಗಲಿದೆ ನೋಡಬೇಕು.