ರಿಯಲ್ ಸ್ಟಾರ್ ಉಪೇಂದ್ರ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಅದ್ದೂರಿ ಚಿತ್ರ 'ರಜನಿ'ಯ ಚಿತ್ರೀಕರಣ ಭರದಿಂದ ಸಾಗಿದೆ. ಚಿತ್ರವನ್ನು ರಾಮು ನಿರ್ಮಿಸುತ್ತಿದ್ದರೆ, ಥ್ರಿಲ್ಲರ್ ಮಂಜು ನಿರ್ದೇಶಿಸುತ್ತಿದ್ದಾರೆ.
MOKSHA
ನಾಯಕಿಗೆ ಬಳೆ ಕೊಡಿಸುವ ಸಲುವಾಗಿ ನಾಯಕ ಸಂತೆಗೆ ಬರುವಾಗ ರೌಡಿಗಳ ಅಟ್ಯಾಕ್ ಆಗುತ್ತದೆ. ನಾಯಕಿಯ ರಕ್ಷಣೆಗಾಗಿ ಎಲ್ಲರನ್ನು ಮಟ್ಟ ಹಾಕುತ್ತಾನೆ ನಾಯಕ. ಈ ದೃಶ್ಯವನ್ನು ವಿಶೇಷವಾಗಿ ನಿರ್ಮಿಸಲಾದ ಸೆಟ್ನಲ್ಲಿ ಚಿತ್ರೀಕರಿಸಲಾಯಿತು.
ಅಂದ ಹಾಗೆ ಇದಕ್ಕಾಗಿ ರಾಮು ವ್ಯಯಿಸಿರುವ ವೆಚ್ಚ ಬರೋಬ್ಬರಿ ಹದಿನಾಲ್ಕು ಲಕ್ಷ. ಇಷ್ಟು ಚಿಕ್ಕ ಚಿತ್ರೀಕರಣಕ್ಕೆ ಇಷ್ಟೆಲ್ಲಾ ಖರ್ಚು ಮಾಡಿರುವ ನಿರ್ಮಾಪಕರು ಇಡೀ ಚಿತ್ರಕ್ಕೆ ವ್ಯಯಿಸಿರುವ ಒಟ್ಟು ಮೊತ್ತ ಎಷ್ಟಾಗಿರಬಹುದು ನೀವೇ ಊಹಿಸಿ.
ಚಿತ್ರದಲ್ಲಿ ಬಾಂಬೆ ಬೆಡಗಿ ಆರತಿ ಛಾಬ್ರಿಯಾ ನಟಿಸುತ್ತಿದ್ದಾರೆ. ಹಂಸಲೇಖರವರ ಸಂಗೀತ ನಿರ್ದೇಶನವಿದೆ. ಈಗಾಗಲೇ ವಿದೇಶದಲ್ಲಿ ಚಿತ್ರೀಕರಣ ಮುಗಿಸಿ ಬಂದಿರುವ ಚಿತ್ರತಂಡ ಉಳಿದ ಚಿತ್ರೀಕರಣವನ್ನು ನಡೆಸುತ್ತಿದೆ. ಈ ಚಿತ್ರದ ಬಳಿಕ ಉಪೇಂದ್ರ ತಮ್ಮ 'ಸೂಪರ್' ನಿರ್ದೇಶನಕ್ಕಿಳಿಯಲಿದ್ದಾರೆ.