ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಗಂಡು ಮಗುವಿಗಾಗಿ ಹಂಬಲಿಸುತ್ತಿರುವ ಶಾರದೆ (Nammamma Sharade | Zee kannada | Serial | Kannada)
ಸುದ್ದಿ/ಗಾಸಿಪ್
Feedback Print Bookmark and Share
 
ಗಂಡು ಮಗುವಿಗಾಗಿ ಹಂಬಲಿಸುವ ಹೆಣ್ಣಿನ ಕತೆಯನ್ನಾಧರಿಸಿ ಮೂಡಿ ಬರುತ್ತಿರುವ ದೈನಿಕ ಧಾರಾವಾಹಿ 'ನಮ್ಮಮ್ಮ ಶಾರದೆ' ಸೋಮವಾರದಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಹೆಣ್ಣನ್ನು ಕೇಂದ್ರವಾಗಿರಿಸಿಕೊಂಡು ಧಾರಾವಾಹಿ ಮಾಡಲಾಗಿದೆ.

ಪ್ರಸ್ತುತ ಸಮಾಜದಲ್ಲಿರುವ ಭ್ರೂಣ ಹತ್ಯೆಯಂತಹ ಹಲವು ಸಮಸ್ಯೆಗಳನ್ನು ಕತೆಯಲ್ಲಿ ತೋರಿಸಲಾಗಿದೆ. ಗಂಡು ಮಗು ಬೇಕು ಎನ್ನುವುದು ಹಲವು ಕಾಲದಿಂದಲೂ ಭಾರತೀಯ ಸಮಾಜದಲ್ಲಿ ಕಾಡುತ್ತಿರುವ ಸಮಸ್ಯೆ. ಭ್ರೂಣ ಹತ್ಯೆ ಶಿಕ್ಷಾರ್ಹ ಅಪರಾಧ ಎಂಬ ಸಂದೇಶವನ್ನು ನೀಡುವಂತಹ ಹಲವು ಅಂಶಗಳನ್ನು ಇದು ಒಳಗೊಂಡಿದೆ.

ಈ ಧಾರಾವಾಹಿ ನಿರ್ದೇಶಿಸಲು ಗೀತಾ ಅವರು ಬರೆದಿರುವ 'ಡಿಸೆಪ್ಪಾಯಿಂಟ್ ಡಾಟರ್ಸ್' ಎಂಬ ಕೃತಿಯೇ ಕಾರಣ ಎನ್ನುತ್ತಾರೆ ಪರಮೇಶ್ ಗುಂಡಕಲ್. ಧಾರಾವಾಹಿಗಾಗಿ ಕತೆ, ಚಿತ್ರಕತೆಯನ್ನು ಇವರೇ ಬರೆದಿದ್ದಾರೆ. ನಿರ್ದೇಶನದ ಹೊಣೆ ರಮೇಶ್ ಇಂದಿರಾ ವಹಿಸಿಕೊಂಡಿದ್ದಾರೆ.

ಕತೆಯಲ್ಲಿ ಹಳ್ಳಿಯ ಶಾರದೆ ಹಾಗೂ ನಗರದ ಶಾರದೆ ಎಂಬ ಇಬ್ಬರು ನಾಯಕಿಯರಿದ್ದಾರೆ. ಹೇಮಾ ಬೆಳ್ಳೂರು ಹಾಗೂ ಶ್ರುತಿ ನಾಯ್ಡು ಕ್ರಮವಾಗಿ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಪದ್ಮಾ ಕುಮುಟಾ, ಹರೀಶ್, ರಾಜೇಶ್ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನಮ್ಮಮ್ಮ ಶಾರದೆ, ಜೀ ಟೀವಿ, ಕನ್ನಡ, ಧಾರಾವಾಹಿ, ಕನ್ನಡ, ಸಿನಿಮಾ, ಹೆಣ್ಣು