ಮೊದಲ ಬಾರಿಗೆ 'ಜಸ್ಟ್ ಮಾತ್ ಮಾತಲ್ಲಿ' ಎಂಬ ಸ್ವಮೇಕ್ ಚಿತ್ರ ನಿರ್ದೇಶಿಸಿ, ನಟಿಸಿದ ಸುದೀಪ್ ನಂತರ ಏನು ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಅವರು ಬಾಲಿವುಡ್‌ನತ್ತ ಹೆಜ್ಜೆ ಇರಿಸಿದ್ದಾರೆ. ನಟನಾಗಿ ಅಲ್ಲ ನಿರ್ದೇಶಕರಾಗಿ.
MOKSHA
ಹೌದು 'ಜಸ್ಟ್ ಮಾತ್ ಮಾತಲ್ಲಿ' ಚಿತ್ರವನ್ನು ಅವರು ಹಿಂದಿಗೆ ರೀಮೇಕ್ ಮಾಡಲಿದ್ದಾರಂತೆ. ಇದಕ್ಕಾಗಿ ಪೂರ್ವ ಸಿದ್ಧತೆ ನಡೆಸಿರುವ ಅವರು ಕನ್ನಡದ ಅವತರಣಿಕೆ ಮುಗಿದ ಬಳಿಕ ಹಿಂದಿಗೆ ರಿಮೇಕ್ ಮಾಡುವ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲಿದ್ದಾರೆ. ಅಲ್ಲಿಯೂ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ತಾವೇ ವಹಿಸಿಕೊಂಡಿದ್ದಾರೆ.
ಈಗಾಗಲೇ ಚಿತ್ರದ ಕತೆಯನ್ನು ಶಾಹಿದ್ ಕಪೂರ್ ಹಾಗೂ ರಿತೇಶ್ ದೇಶ್‌ಮುಖ್‌ರಿಗೆ ವಿವರಿಸಿದ್ದಾರೆ. ಇಬ್ಬರೂ ಚಿತ್ರದಲ್ಲಿ ಭಾಗವಹಿಸಲು ಉತ್ಸಾಹ ತೋರಿದ್ದಾರೆ. ಇಬ್ಬರಲ್ಲಿ ಯಾರೆಂಬುದು ಇನ್ನೂ ಖಚಿತವಾಗಿಲ್ಲ.
ಸದ್ಯಕ್ಕೆ ಸುದೀಪ್ 'ಜಸ್ಟ್ ಮಾತ್ ಮಾತಲ್ಲಿ' ಚಿತ್ರದ ಅಂತಿಮ ಹಂತದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರವನ್ನು ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡುವ ಯೋಜನೆಯಲ್ಲಿದ್ದಾರೆ ಸುದೀಪ್. ಮುಂಬೈ ಯಾತ್ರೆಯೇನಿದ್ದರೂ ಆ ನಂತರವಂತೆ.
ನಟನಾಗಿ ಫೂಂಕ್, ರಣ್ ಚಿತ್ರಗಳಿಂದ ಈಗಾಗಲೇ ಬಾಲಿವುಡ್‌ನಲ್ಲಿ ಗುರುತಿಸಿಕೊಂಡಿರುವ ಸುದೀಪ್, ನಿರ್ದೇಶನದಲ್ಲಿ ಯಶಸ್ವಿಯಾಗುವರೋ ಎಂಬುದನ್ನು ಕಾದು ನೋಡಬೇಕಾಗಿದೆ.