ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಮುಸ್ಸಂಜೆಯ ಗೆಳತಿ'ಗೆ ವಿರೋಧ; ನಾಯಕನಿಗೆ ಹರ್ಷ ! (Mussanjeya Gelathi | Srinivas | Shalini | Kannada Cinema)
ಸುದ್ದಿ/ಗಾಸಿಪ್
Feedback Print Bookmark and Share
 
Srinivas-Shalini
MOKSHA
ತಂದೆ-ಮಗಳು ನಾಯಕ-ನಾಯಕಿಯಾಗಿ ನಟಿಸಿರುವ 'ಮುಸ್ಸಂಜೆ ಗೆಳತಿ' ಮುಂದಿನ ವಾರ ಬಿಡುಗಡೆಯಾಗಲಿದ್ದು, ರಾಜ್ಯದಾದ್ಯಂತ ಪ್ರತಿಭಟನೆಯ ಬೆದರಿಕೆ ಬಂದಿದೆ ಎಂದು ಅದರ ನಾಯಕ ಕಂ ನಿರ್ದೇಶಕ ಕಂ ನಿರ್ಮಾಪಕ ಕಂ ನಾಯಕಿಯ ಅಪ್ಪ ಬಿ.ಪಿ. ಶ್ರೀನಿವಾಸ್ ಹರ್ಷಚಿತ್ತದಿಂದಲೇ ಹೇಳಿಕೊಂಡಿದ್ದಾರೆ!

ಈ ಚಿತ್ರವು ಅಸಹಜ ಸಂಬಂಧಗಳಿಗೆ ಪ್ರೋತ್ಸಾಹ ನೀಡಬಹುದು ಎಂಬ ಕಾರಣಕ್ಕೆ ಹಲವು ಸಂಘಟನೆಗಳು ಸಿನಿಮಾ ಬಿಡುಗಡೆಗೆ ಅವಕಾಶ ಕೊಡುವುದಿಲ್ಲ ಎಂದು ಬೆದರಿಕೆ ಹಾಕಿವೆಯಂತೆ.

ಕೆಲವು ಸಂಘಟನೆಗಳು ನಮ್ಮ ವಿರುದ್ಧವಾಗಿವೆ. ಒಂದು ಸಂಘಟನೆ ನಮ್ಮ ಚಿತ್ರ ಬಿಡುಗಡೆ ಮಾಡಬಾರದೆಂದು ಚಿತ್ರದುರ್ಗದಲ್ಲಿ ಕೇಸೂ ದಾಖಲಿಸಿದೆ ಎಂದು ಪತ್ರಿಕೆಯೊಂದರ ಜತೆ ಮಾತನಾಡುತ್ತಾ ಅವರು ತಿಳಿಸಿದ್ದಾರೆ. ಚಿತ್ರ ಆಗಸ್ಟ್ 28ರಂದು ಬಿಡುಗಡೆಯಾಗಲಿದೆ.

ಮುಸ್ಸಂಜೆಯ ಗೆಳತಿಗೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆ. ಇಲ್ಲಿ ಅಪ್ಪ-ಮಗಳ ನಡುವೆ ಪ್ರಣಯ ದೃಶ್ಯಗಳಿಲ್ಲ. ಹಾಗಾಗಿ ಇಲ್ಲಿ ಅನೈತಿಕ ಸಂಬಂಧಕ್ಕೆ ಪುಷ್ಠಿ ಕೊಡುವ ಅಂಶಗಳ ಬಗ್ಗೆ ಪ್ರಶ್ನೆಯೇ ಬರದು ಎಂದು ತನ್ನ ನಡೆಯನ್ನು ಶ್ರೀನಿವಾಸ್ ಇದೇ ಸಂದರ್ಭದಲ್ಲಿ ಸಮರ್ಥಿಸಿಕೊಂಡಿದ್ದಾರೆ.
Srinivas-Shalini
MOKSHA


ನನ್ನ ಮಗಳು ಶಾಲಿನಿ ಜತೆ ನಾನು ಯಾವುದೇ ರೊಮ್ಯಾಂಟಿಕ್ ದೃಶ್ಯಗಳಲ್ಲಿ ಕಾಣಿಸಿಕೊಂಡಿಲ್ಲ. ನಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಲು ಯತ್ನಿಸಿದ್ದೇವೆ. ಇದರಿಂದಾಗಿ ನಮ್ಮ ನಿಜ ಜೀವನದ ಸಂಬಂಧದ ಮೇಲೆ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಬೀರದು ಎಂದಿದ್ದಾರೆ.

ಜಯಮಾಲ ನಿರಾಕರಣೆ..
ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾರನ್ನು ಶ್ರೀನಿವಾಸ್ ಆಹ್ವಾನಿಸಿದ್ದರು. ಆದರೆ ಅದನ್ನು ತಿರಸ್ಕರಿಸಿದ್ದ ನಟಿ, ನೀವು ಮಾಡುತ್ತಿರುವುದು ಸರಿಯಲ್ಲ ಎಂದು ಬುದ್ಧಿವಾದ ಹೇಳಿದ್ದರಂತೆ.

ಅಷ್ಟೇ ಅಲ್ಲದೆ ಪ್ರತಿಭಟನಾಕಾರರ ಜತೆ ತಾನೂ ಸೇರಿಕೊಳ್ಳುವುದಾಗಿ ಜಯಮಾಲಾ ತಿಳಿಸಿದ್ದಾರೆ. ಅವರೆಲ್ಲ ಯಾಕೆ ಈ ರೀತಿ ಪೂರ್ವಗ್ರಹಪೀಡಿತರಾಗಿ ವರ್ತಿಸುತ್ತಿದ್ದಾರೆ ಎಂದು ನನಗೆ ಆಶ್ಚರ್ಯವಾಗುತ್ತಿದೆ ಎಂಬುದು ಶ್ರೀನಿವಾಸ್ ಮಾತು.

ನನಗಿದೇ ಪ್ರಚಾರ..
ವಿದ್ಯಾರ್ಥಿನಿಯ ಜತೆ ಪ್ರೇಮಪಾಶದಲ್ಲಿ ಬೀಳುವ ಪ್ರೊಫೆಸರ್ ಪಾತ್ರ ಶ್ರೀನಿವಾಸ್‌ರದ್ದು. ಆ ವಿದ್ಯಾರ್ಥಿನಿ ತನ್ನ ನಿಜ ಜೀವನದ ಮಗಳಾಗಿರುವುದು ವಿಶೇಷ ಎನ್ನುವುದು ಶ್ರೀನಿವಾಸ್ ವಾದ. ಆದರೆ ಇದು ವಿಕ್ಷಿಪ್ತತೆಯ ಪರಮಾವಧಿ ಎನ್ನುವುದು ಸಾಮಾಜಿಕ ಸಂಘಟನೆಗಳ ತಿರುಗೇಟು.

ನಾನು ಚಿತ್ರದ ಪ್ರಚಾರಕ್ಕಾಗಿ ಹೆಚ್ಚು ಖರ್ಚು ಮಾಡಿಲ್ಲ, ಇದೇ ತನಗೆ ಪ್ರಚಾರ ನೀಡಲಿದೆ ಎನ್ನುತ್ತಿದ್ದಾರೆ ಶ್ರೀನಿವಾಸ್. ವಿವಾದಗಳಿಂದಾಗಿ ಪ್ರಚಾರಕ್ಕೆ ಸಹಕಾರವಾಗುವ ಭರವಸೆ ಅವರಲ್ಲಿದೆ. 'ನಾನು ಪ್ರತಿಭಟನೆಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ' ಎಂದಿದ್ದಾರೆ.
Srinivas-Shalini
MOKSHA


ಸಮಾಜಕ್ಕೆ ತಪ್ಪು ಸಂದೇಶ..
ಬಹುತೇಕ ಎಲ್ಲಾ ವರ್ಗದವರೂ ಅನೈತಿಕ ಸಂಬಂಧದ ಕತೆಯ ಸಿನಿಮಾಕ್ಕೆ ತಂದೆ-ಮಗಳ ತಾರಾಗಣವಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ನಿಷಿದ್ಧ ಸಂಬಂಧಕ್ಕೆ ಎಡೆ ಮಾಡಿಕೊಡುವ ಸಾಧ್ಯತೆಗಳಿರುವುದರಿಂದ ಶಾಂತಿ ಭಂಗ ಮಾಡುತ್ತದೆ ಎಂಬ ಆತಂಕವೂ ಅವರಲ್ಲಿದೆ.

ಈ ವಿಚಿತ್ರ ಸಿನಿಮಾದಲ್ಲಿ ಅವರು ಆ ರೀತಿಯಲ್ಲಿ ಕಾಣಿಸಿಕೊಂಡರೆ ನಿಜಕ್ಕೂ ಅದು ಆಘಾತಕಾರಿ ಸಂಗತಿ. ತಂದೆ ಎನ್ನುವ ವ್ಯಕ್ತಿಗೆ ಒಂದು ಮಿತಿಯಿದೆ, ಅದನ್ನು ದಾಟಬಾರದು ಎಂದು ಯುವತಿಯೊಬ್ಬಳು ಅಭಿಪ್ರಾಯಪಟ್ಟಿದ್ದಾಳೆ.

ಈ ಚಲನಚಿತ್ರವು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಅದು ಸಿನಿಮಾವಾದರೂ ನಿಜ ಜೀವನದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಆ ಚಿತ್ರದಲ್ಲಿ ಪಾತ್ರಗಳ ನಡುವೆ ಸೆಕ್ಸ್ ಬಗೆಗಿನ ಅಂಶಗಳಿದ್ದರೆ ಖಂಡಿತಾ ಕೆಟ್ಟ ಸಂದೇಶವನ್ನು ನೀಡಿದಂತಾಗುತ್ತದೆ ಎಂದು ಮಹಿಳಾ ಕಾಲೇಜಿನಲ್ಲಿ ಮನಶಾಸ್ತ್ರ ಬೋಧಿಸುತ್ತಿರುವ ಪ್ರೊಫೆಸರ್ ಒಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಆದರೆ ಸಾಮಾಜಿಕ ಕಾರ್ಯಕರ್ತೆಯೊಬ್ಬರು ಸಿನಿಮಾಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ನಮ್ಮ ಪುರಾಣಗಳಲ್ಲಿ ಅನೈತಿಕ ಸಂಬಂಧಗಳ ಸಾಕಷ್ಟು ಕಥೆಗಳಿವೆ. ಇದೇ ಕಟ್ಟುಪಾಡುಗಳನ್ನು ಸಿನಿಮಾಗಳೂ ಅಳವಡಿಸಿಕೊಂಡಿವೆ. ಹದಿ ಹರೆಯದ ಯುವತಿಯರ ಜತೆ ಮಧ್ಯ ವಯಸ್ಸು ಕಳೆದ ನಾಯಕ ನಟರು ನಟಿಸುವಾಗ ಯಾವುದೇ ವಿರೋಧ ವ್ಯಕ್ತಪಡಿಸದ ಸಂಘಟನೆಗಳು, ಸಮಾಜ ಈ ಹೊತ್ತಿನಲ್ಲಿ ಯಾಕೆ ವಿರೋಧಿಸುತ್ತಿವೆ ಎಂದು ಅವರು ಪ್ರಶ್ನಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮುಸ್ಸಂಜೆಯ ಗೆಳತಿ, ಶ್ರೀನಿವಾಸ್, ಶಾಲಿನಿ, ಕನ್ನಡ ಸಿನಿಮಾ, ಭಾರತ, ಅಪ್ಪಮಗಳು, ಅನೈತಿಕ ಸಂಬಂಧ