ಗಾಂಧಿನಗರದಲ್ಲಿ 'ಧೂಳ್' ಎಬ್ಬಿಸಿದ ಲೂಸ್ ಮಾದ ಯೋಗೀಶ್ 'ದೇವದಾಸ್' ಆಗುತ್ತಾರೆ ಎಂಬ ಸುದ್ದಿ ಹಲವು ದಿನಗಳಿಂದ ಗಾಂಧಿ ನಗರದಲ್ಲಿ ಪಸರಿಸಿತ್ತು. ಅದು ಅಗಸ್ಟ್ 27ರಂದು ಚಿತ್ರೀಕರಣ ಆರಂಭಿಸಲಿದೆ ಎಂಬ ಮತ್ತೊಂದು ಸುದ್ದಿ ಬಂದಿದೆ.
ಚಿತ್ರದ ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ಎಬಿಸಿಡಿ ಶಾಂತಕುಮಾರ್ ವಹಿಸಿಕೊಂಡಿದ್ದಾರೆ. ಇವರೊಂದಿಗೆ ಜಿ. ನರಸಿಂಹ ಹಾಗೂ ಕಿರಣ್ ಕುಮಾರ್ ಸಹ ನಿರ್ಮಾಪಕರು.
ಚಿತ್ರಕ್ಕೆ ತಂತ್ರಜ್ಞರು ಹಾಗೂ ಪೋಷಕ ನಟರ ಆಯ್ಕೆ ಈಗಾಗಲೇ ಅಂತಿಮಗೊಂಡಿದೆ. ಆದರೆ ನಾಯಕಿ ಆಯ್ಕೆ ಇನ್ನು ನಿಕ್ಕಿಯಾಗಿಲ್ಲ. ಮೂಲಗಳ ಪ್ರಕಾರ 'ಧೂಳ್'ನ ಅಂದ್ರಿತಾ ರೇ ದೇವದಾಸನಿಗೆ ಪಾರೂ ಆಗಬಹುದು ಎಂದು ಹೇಳಲಾಗುತ್ತಿದೆ.
ಸದ್ಯಕ್ಕೆ ಯೋಗೀಶ್ ಕನ್ನಡ ಚಿತ್ರರಂಗದಲ್ಲಿ ಬ್ಯುಸಿ ನಟ. ಈಗಾಗಲೇ ಇವರ ಅಭಿನಯದ 'ಯೋಗಿ' ಹಾಗೂ 'ರಾವಣ' ಬಿಡುಗಡೆಗೆ ಸಿದ್ಧವಾಗಿದೆ. ಇನ್ನು 'ಪುಂಡ' ಅಂತಿಮ ಹಂತದಲ್ಲಿದ್ದರೆ, 'ಧೂಳ್' ಚಿತ್ರೀಕರಣ ನಡೆಯುತ್ತಿದೆ. ಇವೆಲ್ಲ ಮುಗಿಯುತ್ತಿದ್ದಂತೆ 'ದೇವದಾಸ್' ಆರಂಭವಾಗಲಿದೆ.
ಬಳಿಕ ಹೋಮ್ ಬ್ಯಾನರ್ನ ಚಿತ್ರವೊಂದರಲ್ಲೂ ಯೋಗೀಶ್ ನಟಿಸಲಿದ್ದಾರೆ. ಇದರ ಮಧ್ಯೆ ಅಶ್ವಿನಿ ರಾಮ್ಪ್ರಸಾದ್ರವರ 'ಪಡ್ಡೆ ಹುಡುಗ' ಎಂಬ ಚಿತ್ರ ಆರಂಭವಾಗಲಿದೆ. ಯೋಗಿಯ ಅದೃಷ್ಟದ ಬಾಗಿಲು ತೆರೆದಿದೆ ಎನ್ನವುದಕ್ಕೆ ಇನ್ನೇನು ಬೇಕು ಉದಾಹರಣೆ?