ಈ ವರ್ಷ ಇಷ್ಟು ಹೊತ್ತಿಗಾಗಲೇ 50ಕ್ಕೂ ಹೆಚ್ಚು ಚಿತ್ರಗಳು ತೆರೆಗೆ ಅಪ್ಪಳಿಸಿವೆ. ಆದರೆ ಅವುಗಳಲ್ಲಿ ಯಶಸ್ವಿಯಾಗಿದ್ದು ಬೆರಳೆಣಿಕೆಯ ಚಿತ್ರಗಳು ಮಾತ್ರ. ಅಂಥ ಕೆಲವು ಚಿತ್ರಗಳಲ್ಲಿ ಶಿವಮಣಿ ನಿರ್ದೇಶನದ 'ಜೋಶ್' ಕೂಡ ಒಂದು.
MOKSHA
ಹೊಸ ಹುಡುಗರನ್ನು ಬಳಸಿಕೊಂಡು ಚಿತ್ರರಂಗಕ್ಕೆ ನೂತನ ಟ್ರೆಂಡ್ ಕಲ್ಪಿಸಿಕೊಟ್ಟವರು ಶಿವಮಣಿ. ಚಿತ್ರ ಈಗಾಗಲೇ 126 ದಿನ ಪೂರೈಸಿರುವ ನಿಟ್ಟಿನಲ್ಲಿ ತಂಡ ಒಂದು ಬೃಹತ್ ವಿಶೇಷ ಕಾರ್ಯಕ್ರಮವನ್ನೇ ಇತ್ತೀಚೆಗೆ ನಡೆಸಿತ್ತು.
'ಜೋಶ್' ಯಶಸ್ಸಿನಿಂದ ಪುಳಕಿತರಾಗಿರುವ ನಿರ್ದೇಶಕರು ಚಿತ್ರವನ್ನು ತೆಲುಗು ಮತ್ತು ತಮಿಳಿಗೆ ರಿಮೇಕ್ ಮಾಡಲು ನಿರ್ಧರಿಸಿದ್ದಾರೆ. ಅಲ್ಲಿ ಪರಿಸ್ಥಿತಿಗೆ ತಕ್ಕಂತೆ ಕೆಲ ಬದಲಾವಣೆಗಳನ್ನು ಮಾಡಲು ಯೋಜಿಸಲಾಗಿದೆ. ಪರಭಾಷೆಗಳಲ್ಲಿ ಕೂಡ ಹೊಸ ಹುಡುಗರನ್ನೇ ಹಾಕಿಕೊಳ್ಳಲಾಗುತ್ತದೆ ಎನ್ನುತ್ತಾರೆ ಶಿವಮಣಿ.
ಅಂದಹಾಗೆ ಇದನ್ನು ಹಿಂದಿಗೂ ಡಬ್ ಮಾಡುವ ಬಗ್ಗೆ ಯೋಚನೆ ಮಾಡುತ್ತಿದ್ದಾರೆ ನಿರ್ದೇಶಕರು. ಈ ಪ್ರಯತ್ನಗಳಲ್ಲಿ ಅವರ ಪಾಲಿಗೆ ಯಶಸ್ಸು ಎಷ್ಟರ ಮಟ್ಟಿಗೆ ಒಲಿಯಲಿದೆ ಎಂಬುದನ್ನು ಕಾಲವೇ ಹೇಳಬೇಕು.