ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮತ್ತೆ 'ಕಟ್' ಎನ್ನಲಿರುವ ಸಕಲಕಲಾವಲ್ಲಭ ಹಂಸಲೇಖ (Hamsalekha | Kannada | Bhagavathi Kadu | Music Director)
ಸುದ್ದಿ/ಗಾಸಿಪ್
Feedback Print Bookmark and Share
 
ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಮತ್ತೊಮ್ಮೆ ನಿರ್ದೇಶಕರಾಗುತ್ತಿದ್ದಾರೆ. 'ಸುಗ್ಗಿ' ಚಿತ್ರದ ಬಳಿಕ ನಿರ್ದೇಶನದಿಂದ ದೂರ ಉಳಿದಿದ್ದ ಹಂಸಲೇಖ ಈಗ ಮತ್ತೆ ನಿರ್ದೇಶಕನ ಟೊಪ್ಪಿ ಧರಿಸುವುದಕ್ಕೆ ಮನಸ್ಸು ಮಾಡಿದ್ದಾರೆ.
Hamsalekha
MOKSHA


ಅವರೀಗ ಸಾಹಿತಿ ಕುಂ. ವೀರಭದ್ರಪ್ಪರವರ 'ಭಗವತಿ ಕಾಡು' ಕಾದಂಬರಿಯನ್ನು ತೆರೆಗೆ ತರುವುದಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಚಿತ್ರಕ್ಕೆ ನಿರ್ಮಾಣವನ್ನು ಕೂಡ ಸ್ವತಃ ಮಾಡುತ್ತಿದ್ದಾರೆ. ಈ ವರ್ಷದ ಕೊನೆಯಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.

ಅದಕ್ಕೂ ಮುನ್ನ ಒಂದಷ್ಟು ಚಿತ್ರಕತೆಗಳನ್ನು ಪುಸ್ತಕ ರೂಪದಲ್ಲಿ ಹೊರತರಲು ಯೋಚಿಸುತ್ತಿದ್ದಾರೆ. ರೀಮೇಕ್-ಸ್ವಮೇಕ್ ಚಿತ್ರಗಳ ಬಗ್ಗೆ ಮಾತನಾಡುವ ಹಂಸಲೇಖ, 'ನಮ್ಮಲ್ಲಿ ಕಥೇನೇ ಇಲ್ಲ ಎನ್ನುವವರಿದ್ದಾರೆ. ಆದರೆ ಕಥೆ ಹೇಳಿದರೆ ಎಷ್ಟೋ ಜನರಿಗೆ ಅರ್ಥವೇ ಆಗೋಲ್ಲ' ಎನ್ನುತ್ತಾರೆ ಅವರು.

ಅಷ್ಟೇ ಅಲ್ಲ. ಚಲನಚಿತ್ರ ಮಂಡಳಿ ಬರೀ ವ್ಯಾಪಾರ ಮಾಡುವುದರಲ್ಲಿ ಸಮಯ ಕಳೆಯಬಾರದು. ಎಲ್ಲರೂ ರಿಮೇಕ್ ಮಾಡುತ್ತಿಲ್ಲ ಎಂಬುದೇ ಸಮಾಧಾನ. ಕಬ್ಬು ಬೆಳೆಯುವ ಜಾಗದಲ್ಲಿ ಹುರುಳಿಯನ್ನಾದರೂ ಬೆಳೆಯುತ್ತಿದ್ದಾರೆ ಎಂಬುದೇ ಖುಷಿ ಎನ್ನುತ್ತಾರೆ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಸಾಹಿತಿಯಾಗಿರುವ ಹಂಸಲೇಖ.

ಇದೇ ಕಾರಣಕ್ಕಾಗಿ ಇರುವ 300 ಚಿತ್ರಕಥೆಗಳಲ್ಲಿ 75 ಅತ್ಯುತ್ತಮ ಚಿತ್ರಕಥೆಗಳನ್ನು ಒಂದು ಪುಸ್ತಕ ರೂಪದಲ್ಲಿ ಹೊರತರಲಿದ್ದಾರೆ. ನವೆಂಬರ್ ಹೊತ್ತಿಗೆ 75 ಚಿತ್ರಕತೆಗಳ ಆನ್-ಲೈನ್ ಅರ್ಡರ್ ಅನ್ನು ಅವರು ಪುಸ್ತಕ ರೂಪದಲ್ಲಿ ಅಚ್ಚು ಹಾಕಿಸಲಿದ್ದಾರೆ. ಅದರಿಂದ ಯಾರು ಬೇಕಾದರೂ ಉಪಯೋಗ ಪಡೆಯಲಿ ಎಂಬುದೇ ಅವರ ಬಯಕೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹಂಸಲೇಖ, ಕನ್ನಡ, ಸುಗ್ಗಿ, ಭಗವತಿ ಕಾಡು, ಸಿನಿಮಾ, ಸಂಗೀತ ನಿರ್ದೇಶಕ, ಸಾಹಿತಿ