ಗಾಂಧಿನಗರದಿಂದ ಯಾವುದೇ ಚಿತ್ರಗಳು ಈ ವಾರ ತೆರೆಗೆ ಬರುತ್ತಿಲ್ಲ. ಶ್ರೀನಿವಾಸ್ ನಿರ್ದೇಶನದ 'ಮುಸ್ಸಂಜೆ ಗೆಳತಿ' ಬಿಡುಗಡೆಯಾಗುತ್ತಿದೆ ಎಂಬ ಸುದ್ದಿ ಇತ್ತು. ಆದರೆ ಅನಿವಾರ್ಯ ಕಾರಣಗಳಿಂದ ಬಿಡುಗಡೆ ಮುಂದೂಡಿದೆ.
ಚಿತ್ರದಲ್ಲಿ ತಂದೆಗೆ ಗೆಳತಿಯಾಗಿ ಮಗಳು ನಟಿಸಿರುವ ಬಗ್ಗೆ ಗಾಂಧಿನಗರದಲ್ಲಿ ವಿವಾದ ಹಬ್ಬಿತ್ತು. ಈ ನಿಟ್ಟಿನಲ್ಲಿ ಚಿತ್ರದ ಬಿಡುಗಡೆ ತಡವಾಗಿದೆ. ಚಿತ್ರದ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಜಯಮಾಲಾ ಸ್ವತಃ ಆಕ್ಷೇಪ ಸಲ್ಲಿಸಿದ್ದರು. ಆದರೆ ಇದರಿಂದ ಚಿತ್ರದ ಪ್ರಚಾರ ಹೆಚ್ಚಲಿದೆ ಎಂಬುದು ಚಿತ್ರ ನಿರ್ದೇಶಕರ ಅಂಬೋಣ.
ಈ ನಡುವೆ ಬಿ.ಆರ್. ಕೇಶವ ನಿರ್ದೇಶನದ 'ಮೃಗ' ಚಿತ್ರದ ಬಿಡುಗಡೆಯೂ ಮುಂದಕ್ಕೆ ಹೋಗಿದೆ. ಕೆಲ ಆಂತರಿಕ ಮತ್ತು ತಾಂತ್ರಿಕ ತೊಂದರೆಯಿಂದಾಗಿ ಚಿತ್ರದ ಬಿಡುಗಡೆ ತಡವಾಗಿದೆ.
ಅಂದಹಾಗೆ ನಿರ್ದೇಶಕರು ಇದರ ಮಧ್ಯೆ ಸದ್ದಿಲ್ಲದೆ ಕಡಿಮೆ ಬಜೆಟ್ ಚಿತ್ರವೊಂದನ್ನು ಮುಗಿಸಿದ್ದಾರೆ. 'ನನಗೂ ವರ ಬೇಕು' ಎಂಬ ಈ ಚಿತ್ರದಲ್ಲಿ ಹಿರಿಯ ನಟ ಎಂ.ಎಸ್. ಉಮೇಶ್ ಪ್ರಮುಖ ಪಾತ್ರ ಮಾಡಿದ್ದರಂತೆ. ಉಳಿದ ವಿಚಾರವನ್ನು ಇನ್ನು ಬಿಟ್ಟುಕೊಟ್ಟಿಲ್ಲ.