ರಾಜ್ಯದ ಸಮಸ್ಯೆಗಳ ಬಗ್ಗೆ ಗಂಟ್ಟೆಗಟ್ಟಲೆ ಮಾತನಾಡುವ ರಾಜಕಾರಣಿ, ತನ್ನ ಗೆಳತಿಯ ಕರೆ ಬಂದಾಕ್ಷಣ ಕಂಪಿಸುತ್ತಾನೆ. ಆಮೇಲೆ ರಾಜ್ಯದ ಸಮಸ್ಯೆ ಬಿಟ್ಟು ಆಕೆಯ ಹಿಂದೆ ಓಡಿ ಹೋಗಿಬಿಡುತ್ತಾನೆ. ಇಂತಹ ಹತ್ತು ಹಲವು ಅಂಶಗಳನ್ನು ಒಳಗೊಂಡಿದೆ 'ಕಳ್ಳರ ಸಂತೆ'.
ಎಲ್ಲ ಚಿತ್ರಗಳಂತೆ ತಮ್ಮ ಚಿತ್ರವಾಗಬಾರದು ಎಂಬ ದೃಷ್ಟಿಯಿಂದ ವಿಭಿನ್ನ ಚಿತ್ರಕತೆ ಆಯ್ಕೆ ಮಾಡಿಕೊಂಡಿದ್ದಾರೆ ನಿರ್ದೇಶಕಿ ಸುಮನಾ ಕಿತ್ತೂರು. ಚಿತ್ರದಲ್ಲಿ ಯಶ್ ನಾಯಕ. 'ಮೊಗ್ಗಿನ ಮನಸು' ಚಿತ್ರದ ಬಳಿಕ ಯಶ್‌ಗೆ ಹಲವು ಅವಕಾಶಗಳು ಹುಡುಕಿ ಬಂದಿವೆ. ಇದೀಗ ಕಿತ್ತೂರು ಚಿತ್ರದಲ್ಲಿ ನಟಿಸಿರುವುದಕ್ಕೆ ಖುಷಿಯಿದೆ ಎನ್ನುತ್ತಾರೆ ಯಶ್.
ಚಿತ್ರಕ್ಕೆ ವಿ. ಮನೋಹರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಕೆಲವು ಚಿತ್ರಗಳಿಗೆ ಎಷ್ಟು ಒಳ್ಳೆಯ ಸಂಗೀತ, ಸಾಹಿತ್ಯ ಕೊಟ್ಟರೂ ಅದನ್ನು ಕೆಟ್ಟ ದೃಶ್ಯಗಳಲ್ಲಿ ತೋರಿಸುತ್ತಾರೆ. ಆದರೆ ಇಲ್ಲಿ ಹಾಗೆ ಆಗುವ ಸಾಧ್ಯತೆಗಳಿಲ್ಲ ಎಂದು ಹೇಳಿದರು ಮನೋಹರ್. ಇತ್ತೀಚೆಗೆ ಚಿತ್ರದ ಧ್ವನಿಸುರುಳಿ ಬಿಡುಗಡೆಯಾಗಿದೆ.