ಜಮೀನ್ದಾರರ ಕಾಲದ ಕತೆಯನ್ನು ಒಳಗೊಂಡಿರುವ ಚಿತ್ರ ಸ್ವರಾಂಜಲಿ. ಚಿತ್ರದ ಕತೆ, ಚಿತ್ರಕತೆ, ಸಂಭಾಷಣೆ, ನಿರ್ದೇಶನ, ನಿರ್ಮಾಣದ ಜವಾಬ್ದಾರಿ ಜೊತೆಗೆ ಒಂದು ಪಾತ್ರವನ್ನೂ ಮಾಡುತ್ತಿದ್ದಾರೆ ಎಂ.ಎಸ್. ಶ್ರೀನಿವಾಸ್.
ಶೀರ್ಷಿಕೆ ಸಂಗೀತ ಪ್ರಧಾನವಾದರೂ, ಚಿತ್ರದಲ್ಲಿ ಫ್ಯಾಮಿಲಿ ಸೆಂಟಿಮೆಂಟ್ ಹಾಗೂ ಸಂಗೀತ ಸಮ ಪ್ರಮಾಣದಲ್ಲಿದೆಯಂತೆ. ಜೊತೆಗೆ ಕ್ರೈಂ ಕೂಡ ಜೊತೆಗಿದೆ ಎನ್ನುತ್ತಾರೆ ನಿರ್ದೇಶಕರು. ಚಿತ್ರವು ತಲೆತಲಾಂತರಗಳಿಂದ ಬಂದ ಜಮಿನ್ದಾರ ಅಪ್ಪಣ್ಣಯ್ಯ ಅವರ ಮೇಲೆ ಕತೆ ಅವಲಂಬಿತವಾಗಿದೆ. ಚಿತ್ರಕ್ಕೆ ಆಂಧ್ರ ಮೂಲದ ರಮಣ ನಾಯಕ. ಈ ಮೊದಲು ತೆಲುಗು, ತಮಿಳು, ಮಲೆಯಾಳಂನಲ್ಲಿ ನಟಿಸಿದ ಅನುಭವ ಇವರಿಗಿದೆ.
ಚಿತ್ರಕ್ಕೆ ರಶ್ಮಿ ನಾಯಕಿ. ಸುಮಾರು ದಿನಗಳ ನಂತರ ಒಳ್ಳೆಯ ಪಾತ್ರ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು ರಶ್ಮಿ. ಇದುವರೆಗೆ ಏನೇನು ಕಲಿತಿಲ್ಲವೋ, ಅದನ್ನೆಲ್ಲ ಈ ಚಿತ್ರದಲ್ಲಿ ಕಲಿಯುತ್ತಿದ್ದೇನೆ ಎನ್ನುತ್ತಾರೆ ಅವರು. ಚಿತ್ರದಲ್ಲಿ ಎರಡನೇ ನಾಯಕಿಯಾಗಿ ಸ್ಪೂರ್ತಿ ನಟಿಸುತ್ತಿದ್ದಾರೆ.