ಎದ್ದೇಳು ಮಂಜುನಾಥದ ನಾಯಕಿ ನಟಿ ಯಜ್ಞಾ ಶೆಟ್ಟಿ ಈಗ ಖಾಸಗಿ ವಾಹಿನಿಯ ಮೂಲಕ ಡ್ರೀಂ ಗರ್ಲ್ ಆಗಿ ಹೊರಬಂದಿದ್ದಾರೆ. ಇದಕ್ಕೆ ಜೊತೆಗೆ ಐದು ಲಕ್ಷ ರೂ. ಬಹುಮಾನದ ಜೊತೆಗೆ ಕನಸಿನ ಹುಡುಗಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಕಳೆದ ಏಳು ತಿಂಗಳಿಂದ ಖಾಸಗಿ ವಾಹಿನಿ ನಡೆಸುತ್ತಿದ್ದ ಈ ರಿಯಾಲಿಟಿ ಶೋಗೆ ಅಂತಿಮ ತೆರೆ ಬಿದ್ದಿದ್ದು, ಪ್ರಿಯಾಂಕ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇದು ಹನ್ನೆರಡು ಉದಯೋನ್ಮುಖ ಸಿನಿಮಾ ನಟಿಯರಿಂದ ಪ್ರಾರಂಭವಾದ ಈ ರಿಯಾಲಿಟಿ ಶೋನಲ್ಲಿ ಆರು ಡ್ಯಾನ್ಸ್ ಮಾಸ್ಟರ್ಗಳು ತಲಾ ಇಬ್ಬರು ಸಿನಿಮಾ ನಟಿಯರಿಗೆ ತರಬೇತಿ ನೀಡಿ, ಅವರನ್ನು ಈ ಕಾರ್ಯಕ್ರಮಕ್ಕೆ ತಯಾರು ಮಾಡಿದ್ದರು.
ನೃತ್ಯ ನಿರ್ದೇಶಕರಾಗಿದ್ದ ತಾರಾ, ಇಮ್ರಾನ್ ಸರ್ದಾರಿಯಾ ಮತ್ತು ನಿರ್ದೇಶಕ ಚಿ. ಗುರುದತ್ ಅವರು ತೀರ್ಪುಗಾರರಾಗಿ ಭಾಗವಹಿಸಿದ್ದರು. ಅಂತಿಮ ಹಂತದಲ್ಲಿ ತಾಜ್ಮಹಲ್ ಖ್ಯಾತಿಯ ನಟ ಅಜಯ್ ರಾವ್ ವಿಶೇಷ ಅತಿಥಿಯಾಗಿ ಕಾಣಿಸಿಕೊಂಡಿದ್ದರು.