ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಿಶಾ ಕೊಠಾರಿ ಸೆಕ್ಸೀಯಷ್ಟೇ ಅಲ್ಲ, ಪ್ರತಿಭಾನ್ವಿತೆ: ಪ್ರೇಮ್ (Nisha Kothari | Priyanka Kothari | Prem | Raj)
ಸುದ್ದಿ/ಗಾಸಿಪ್
Feedback Print Bookmark and Share
 
Nisha Kothari
IFM
ನಿಶಾ ಕೋಠಾರಿ ರಾಜ್ ಚಿತ್ರದಲ್ಲಿ ಬೀಡುಬೀಸಾಗಿ ನಟಿಸಿ ಪಡ್ಡೆಗಳ ನಿದ್ದೆಗೆಡಿಸಿದ್ದು ಈಗ ಜಗಜ್ಜಾಹೀರು. ಕನ್ನಡ ಚಿತ್ರರಂಗದಲ್ಲಿ ಬೇಕಾಬಿಟ್ಟಿ ತನ್ನ ಗ್ಲ್ಯಾಮರ್ ಪ್ರದರ್ಶನ ಮಾಡಿದ ನಿಶಾ ಕೊಠಾರಿಯ ಬಗ್ಗೆ ಮಾಧ್ಯಮಗಳಲ್ಲಿ ಆಕೆಯ ಸ್ಕಿನ್ ಶೋ ಬಿಟ್ಟರೆ ಪ್ರತಿಭೆಯ ಗುಣಗಾನ ಕಂಡುಬರಲಿಲ್ಲ. ರಾಮ್ ಗೋಪಾಲ್ ವರ್ಮಾರ ಅಗ್ಯಾತ್‌ನಲ್ಲೂ ಬಿಕಿನಿಯಲ್ಲಿ ಕಾಣಿಸಿಕೊಂಡ ಈಕೆ ಈವರೆಗೆ ತನ್ನ ನಟನೆಗಿಂತ ಹೆಚ್ಚಾಗಿ ಸುದ್ದಿಯಾದದ್ದು ತನ್ನ ಬಿಚ್ಚುಗಾರಿಕೆಯಿಂದಲೇ. ಆದರೆ ನಿರ್ದೇಶಕ ಪ್ರೇಮ್ ಹಾಗೂ ಕೊರಿಯೋಗ್ರಾಫರ್ ಎಸ್. ಕೃಷ್ಣ ಮಾತ್ರ ನಿಶಾ ಕೊಠಾರಿ ಕೇವಲ ಸೆಕ್ಸೀ ಮಾತ್ರವಲ್ಲ. ಆಕೆ ಖಂಡಿತಾ ಒಬ್ಬ ಪ್ರತಿಭಾನ್ವಿತೆ ಎಂದು ವಿವರಿಸುತ್ತಾರೆ.

ಪ್ರೇಮ್ ಹೇಳುವಂತೆ, ನಿಶಾ ಕೊಠಾರಿ ನಮ್ಮ ರಾಜ್ ಚಿತ್ರದ ಹಾಡುಗಳಿಗೆ ದೊಡ್ಡ ಬೋನಸ್. ನಾನು ನಿಶಾ ಕೊಠಾರಿಯನ್ನು ಈ ಮೊದಲೇ ನನ್ನ ಹಳೆಯ ಪ್ರಾಜೆಕ್ಟಿಗೆ ಬಳಸಲು ನಿರ್ಧರಿಸಿದ್ದೆ. ಆದರೆ ಅಂದು ಆಕೆಯ ಡೇಟ್ಸ್ ಹೊಂದಾಣಿಕೆಯಾಗಲಿಲ್ಲ. ಅದೇ ಸಂದರ್ಭ ರಾಜ್ ಚಿತ್ರದ ಅಣಿಯಲ್ಲಿದ್ದಾಗ ನನಗೆ ಮತ್ತೆ ನಿಶಾ ನೆನಪಾದಳು. ಆಕೆ ಈ ಪಾತ್ರಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತಾಳೆ ಅಂತಲೂ ಅನಿಸಿತು. ಡೇಟ್ಸ್ ಕೂಡಾ ಹೊಂದಿಕೆಯಾಯಿತು ಎನ್ನುತ್ತಾರೆ ಪ್ರೇಮ್.

Nisha Kothari
IFM
ನಿಶಾ ತುಂಬ ಕ್ಯೂಟ್ ಹುಡುಗಿ. ಆದರೆ ಅಷ್ಟೇ ಸೆಕ್ಸೀಯಾಗಿಯೂ ಆಕೆ ಕಂಗೊಳಿಸುತ್ತಾಳೆ. ಆದರೆ ರಾಜ್ ಚಿತ್ರದಲ್ಲಿ ಆಕೆ ಗ್ಲ್ಯಾಮರ್ ಬೊಂಬೆ ಮಾತ್ರವಲ್ಲ. ಆಕೆ ತನ್ನ ಭಾವುಕ ಸನ್ನಿವೇಶಗಳಲ್ಲಿ ಅದ್ಭುತವಾಗಿ ನಟಿಸಿದ್ದಾಳೆ. ಆಕೆಗೆ ಪ್ರತಿಭೆಯೂ ಇದೆ. ನಿಶಾ ಸೆಕ್ಸೀಯಾಗಿ ಕಂಡಷ್ಟೇ ಪ್ರತಿಭಾನ್ವಿತಳೂ ಹೌದು ಎಂಬುದನ್ನು ರಾಜ್ ಮೂಲಕ ಸಾಬೀತುಪಡಿಸಿದ್ದಾಳೆ ಎನ್ನುತ್ತಾರೆ ಪ್ರೇಮ್.

ರಾಜ್ ಚಿತ್ರದ ಶೂಟಿಂಗ್ ಸಂದರ್ಭ ಆಕೆ ಆಕ್ಸಿಡೆಂಟ್‌ಗೀಡಾಗಿ ಚಿತ್ರೀಕರಣ ಅರ್ಧಕ್ಕೇ ನಿಂತಿತು. ಆದರೂ ಆಕೆ ತನ್ನ ವೃತ್ತಿಪರತೆಯನ್ನು ಚೆನ್ನಾಗಿ ನಿಭಾಯಿಸಿದಳು ಎಂದು ವಿವರಿಸುತ್ತಾರೆ ಪ್ರೇಮ್.

ಕೊರಿಯೋಗ್ರಾಫರ್ ಕೃಷ್ಣ ಹೇಳುವಂತೆ, ನಿಶಾ ಚಿತ್ರದಲ್ಲಿ ಅದ್ಭುತವಾಗಿ ಕಾಣಿಸಿದ್ದಾಳೆ. ಕನ್ನಡ ಸಿನಿಮಾರಂಗದ ಗ್ಲ್ಯಾಮರ್ ಪ್ರಪಂಚದಲ್ಲಿ ಆಕೆ ಒಂದು ಗಟ್ಟಿ ಹೆಜ್ಜೆಯನ್ನೇ ಇರಿಸಿದ್ದಾಳೆ. ಕೆಲವೊಮ್ಮೆ ಸ್ವಲ್ಪ ಸ್ಕಿನ್ ಶೋ ಕೂಡಾ ಪಾತ್ರ ದೃಷ್ಟಿಯಲ್ಲಿ ನಟಿಯರಿಗೆ ಅಗತ್ಯವೆನಿಸುತ್ತದೆ. ನಿಶಾ ತನ್ನ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾಳೆ. ಗ್ಲ್ಯಾಮರ್ ಜತೆಜತೆಗೇ ತಾನು ಅದ್ಭುತವಾಗಿ ನಟಿಸಬಲ್ಲೆ ಎಂದು ತೋರಿಸಿಕೊಟ್ಟಿದ್ದಾಳೆ. ಅದರಲ್ಲೂ ನಿಶಾಳ ಹೇ ಪಾರೂ ಹಾಡಂತೂ ಅದ್ಭುತವಾಗಿ ಮೂಡಿಬಂದಿದೆ ಎನ್ನುತ್ತಾರೆ.

ನಿಶಾ ಕೊಠಾರಿ ಮಾತ್ರ ತನ್ನ ಬಿಚ್ಚುಗಾರಿಕೆಗೆ ಸಮರ್ಥ ಉತ್ತರವನ್ನೇ ನೀಡುತ್ತಾರೆ. ಸ್ಕಿನ್ ಶೋ ಮಾಡುವುದು ಎಲ್ಲರಿಗೂ ಸಾಧ್ಯ ಎಂದುಕೊಳ್ಳಬೇಡಿ. ಸ್ಕಿನ್ ಶೋ ಕೂಡಾ ಒಂದು ಕಲೆಯೇ. ಒಮ್ಮೆ ಬಿಕಿನಿ ಧರಿಸಿ ಸಮಾಜದಲ್ಲಿ ಗೌರವಯುತವಾಗಿ ತನ್ನ ಕೆರಿಯರ್ ಮುಂದುವರಿಸುವುದು ಸುಲಭವಲ್ಲ. ಸ್ಕಿನ್ ಶೋಗೂ ಕೂಡಾ ಗೌರವ ದೊರೆಯುವಂತೆ, ಅದಕ್ಕೊಂದು ಸಾಂಪ್ರದಾಯಿತ್ವದ ಚೌಕಟ್ಟು ನೀಡುವುದೂ ಒಂದು ಕಲೆಯೇ. ಜತೆಗೆ ಬಿಕಿನಿ ಧರಿಸಿ ಅದಕ್ಕೊಪ್ಪುವ ಬಾಡಿ ಲ್ಯಾಂಗ್ವೇಜ್, ನಟನೆ ಪ್ರದರ್ಶಿಸುವುದು ಸುಲಭದ ಕೆಲಸವಲ್ಲ ಎಂದು ತನ್ನ ಪ್ರತಿಭೆಯನ್ನು ಹೊರಹಾಕುತ್ತಾಳೆ ಈ ನಶೆಯೇರಿಸುವ ನಿಶಾ ಕೊಠಾರಿ ಅರ್ಥಾತ್ ಪ್ರಿಯಾಂಕಾ ಕೊಠಾರಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನಿಶಾ ಕೊಠಾರಿ, ರಾಜ್, ಪ್ರಿಯಾಂಕ ಕೊಠಾರಿ, ಪ್ರೇಮ್, ಕೃಷ್ಣ