ಕೆಪಿಎಲ್‌ಗೆ, ದುಡ್ಡು ಇನ್ನೂ ಬೇಕ್ರೀ..' ಎಂದ ಕನ್ನಡ ನಟೀಮಣಿಯರು!
MOKSHA
ಕ್ರಿಕೆಟ್ ಅಂಗಳಕ್ಕೆ ಗ್ಲ್ಯಾಮರ್ ಛಾಪು ಮೂಡಿಸುವಲ್ಲಿ ಟ್ವೆಂಟಿ20 ಕ್ರಿಕೆಟಿನದ್ದು ಮಹತ್ತರ ಪಾತ್ರ. ಐಪಿಎಲ್ ಟಿ20ಯಲ್ಲಿ ತಂಡದ ಒಡೆಯರಾಗಿಯೂ ಬಾಲಿವುಡ್ ನಟನಟಿಯರು ಮಿಂಚಿದ್ದೂ ಅಲ್ಲದೆ, ತಂಡಗಳ ರಾಯಭಾರಿಯಾಗಿಯೂ ಮಿಂಚಿದವರು ಹಲವರು. ನಟಿ ಶಿಲ್ಪಾ ಶೆಟ್ಟಿ ರಾಜಸ್ತಾನ ತಂಡದ ಒಡತಿಯಾದರೆ, ಶಾರುಖ್ ಖಾನ್ ಕೊಲ್ಕತ್ತಾ ತಂಡದ ಒಡೆಯ. ಇನ್ನು ಹಾಟ್ ಬೆಡಗಿ ಕತ್ರಿನಾ ಕೈಫ್ ರಾಯಲ್ ಚಾಲೆಂಜರ್ಸ್ ರಾಯಭಾರಿಯಾಗಿ ಮಲ್ಯ ಪಡೆಯಲ್ಲಿ ಮಿಂಚಿದಳು.
ಅದೆಲ್ಲಾ ಈಗ ಮುಗಿದ ಕಥೆ. ಈಗ ಏನಿದ್ದರೂ ಅಂತಹುದೇ ಸರದಿ ಕೆಪಿಎಲ್‌ದು. ಕರ್ನಾಟಕ ಪ್ರೀಮಿಯರ್ ಲೀಗ್‌ನ ಟಿ20 ಪಂದ್ಯಾವಳಿ ಹತ್ತಿರ ಬರುತ್ತಿದ್ದಂತೆ ವಿವಿಧ ತಂಡಗಳ ರಾಯಭಾರಿ ಪಟ್ಟಿಯಲ್ಲಿ ನಮ್ಮ ಕನ್ನಡ ನಟನಟಿಯರ ಹೆಸರು ಚಾಲ್ತಿಯಲ್ಲಿದೆ. ಚಾಲ್ತಿಯಲ್ಲಿರುವ ಹೆಸರುಗಳ ಪೈಕಿ ರಮ್ಯಾ, ಐಂದ್ರಿತಾ ರೇ, ಶರ್ಮಿಳಾ ಮಾಂಡ್ರೆ, ದರ್ಶನ್, ಸುದೀಪ್ ಹಾಗೂ ಪೂಜಾ ಗಾಂಧಿ ಪ್ರಮುಖರು.
ಸೆ.9ರಿಂದ ಪಂದ್ಯಾವಳಿ ಆರಂಭವಾಗಲಿದ್ದರೂ, ಯಾವ ತಂಡವೂ ತಮ್ಮ ರಾಯಭಾರಿ ಯಾರೆಂದು ಅಧಿಕೃತವಾಗಿ ಖಚಿತಗೊಳಿಸಿಲ್ಲ.ಆದರೂ, ಯಾವ ತಂಡಗಳಿಗೂ ಕನ್ನಡ ನಟನಟಿಯರು ಎಟಕುತ್ತಿಲ್ಲವೆಂಬುದೂ ಅಷ್ಟೇ ನಿಜ. ಕನ್ನಡ ಚಿತ್ರರಂಗದ ನಟ ನಟಿಯರು ಬಯಸಿದಷ್ಟು ದುಡ್ಡು ಸುರಿಯಲು ತಂಡದ ಒಡೆಯರು ರೆಡಿ ಇಲ್ಲ. ತಂಡ ಕೇಳಿದ ಅಲ್ಪ ಮೊತ್ತಕ್ಕೆ ಮೈದಾನದಲ್ಲಿ ಕೈಯಾಡಿಸಲು ನಾಯಕ ನಾಯಕಿಯರು ತಯಾರಿಲ್ಲ.
MOKSHA
ನಟಿ ಶರ್ಮಿಳಾ ಮಾಂಡ್ರೆ ಹೇಳುವಂತೆ, ಕೆಪಿಎಲ್ ಜತೆ ಸೇರಲು ನನಗೇ ನೋ ಇಷ್ಟವಿದೆ ನಿಜ. ಆದರೆ, ನನಗೆ ನೀಡಲಿರುವ ಸಂಭಾವನೆ ಏನೇನೂ ಸಾಲದು. ಅವರು ನೀಡುವ ಸಂಭಾವನೆಗೆ ಅಷ್ಟು ದಿನಗಳ ಕಾಲ ಮೈದಾನದಲ್ಲಿ ಸಮಯ ಕಳೆಯಲು ಸಾಧ್ಯವೂ ಇಲ್ಲ. ಅಷ್ಟು ಕಡಿಮೆ ಮೊತ್ತಕ್ಕೆ ಕೆಪಿಎಲ್ ತಂಡವೊಂದರ ರಾಯಭಾರಿಯಾಗಿ ಕೈಬೀಸುವುದಕ್ಕಿಂತ ನಾನೀಗ ಸಹಿ ಮಾಡಿರುವ ಎರಡು ಚಿತ್ರಗಳ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವುದು ಹಾಗೂ ಅದಕ್ಕೆ ತಯಾರಿ ನಡೆಸುವುದು ಎಷ್ಟೋ ಪಾಲು ವಾಸಿ. ಕೇವಲ ಇಷ್ಟೇ ಅಲ್ಲ, ಅವರು ಹೆಚ್ಚು ಸಂಭಾವೆ ನೀಡಿದರೂ ಎರಡು ವಾರಗಳಲ್ಲಿ ಒಂದು ದಿನ ಕೂಡಾ ಪಂದ್ಯಾವಳಿಯಲ್ಲಿ ಭಾಗವಹಿಸಲು ನನಗೆ ಸಮಯವಿಲ್ಲ ಎನ್ನುತ್ತಾರೆ ಶರ್ಮಿಳಾ. ಮೂಲಗಳ ಪ್ರಕಾರ, ಶರ್ಮಿಳಾ ಮಾಂಡ್ರೆ ತಂಡವೊಂದರಿಂದ 10 ಲಕ್ಷ ಸಂಭಾವನೆ ಬಯಸಿದ್ದರಂತೆ. ಆದರೆ ಅಷ್ಟೊಂದು ದುಡ್ಡು ಸುರಿಯಲು ತಂಡದ ಒಡೆಯರು ರೆಡಿ ಇಲ್ಲವಂತೆ.
MOKSHA
ಇನ್ನು ಚುರುಕು ಚಿಗರೆ ಕಂಗಳ ಮುದ್ದು ಮುಖದ ಬೆಡಗಿ ಐಂದ್ರಿತಾ ರೇ ಸರದಿ. ಐಂದ್ರಿತಾ ರೇಯನ್ನು ತಮ್ಮ ತಂಡದ ರಾಯಬಾರಿಯನ್ನಾಗಿ ಮಾಡಿಕೊಳ್ಳಲು ಎರಡು ತಂಡಗಳ ಒಡೆಯರು ಆಕೆಯನ್ನು ಸಂಪರ್ಕಿಸಿದ್ದರಂತೆ. ಈಗಾಗಲೇ ಅವರಲ್ಲಿ ಒಬ್ಬರಿಗೆ ಐಂದ್ರಿತಾ ನೋ ಎಂದು ಹೇಳಿದ್ದಾಗಿದೆ. ಐಂದ್ರಿತಾ ಎಂಟು ಲಕ್ಷ ರೂಪಾಯಿ ಸಂಭಾವನೆ ಕೇಳಿದ್ದರಂತೆ. ಆದರೆ ಅವರು ಕೇವಲ ಮೂರು ಲಕ್ಷ ನೀಡಲು ತಯಾರಿದ್ದರಂತೆ.
ಐಂದ್ರಿತಾ ಹೇಳುವಂತೆ, ಸೆಲೆಬ್ರಿಟಿಗಳಿಗೆ ಅವರದ್ದೇ ಆದ ಮಾರ್ಕೆಟ್ ವ್ಯಾಲ್ಯೂ ಇದೆ. ಹಾಗಾಗಿ ಕೇವಲ ಸಣ್ಣ ಮೊತ್ತದ ಹಣಕ್ಕೆ ನನ್ನನ್ನು ಅವರ ತಂಡದ ಸ್ಟಾರ್ ವ್ಯಾಲ್ಯೂ ಆಗಿ ಅವರು ಬಯಸೋದು ಯಾಕಾಗಿ? ಕಡಿಮೆ ಮೊತ್ತಕ್ಕೆ ಸಾಧ್ಯವಿಲ್ಲ ಎನ್ನುತ್ತಾಳೆ. ಇಷ್ಟೇ ಅಲ್ಲ. ಐಂದ್ರಿತಾರನ್ನು ಸಂಪರ್ಕಿಸುವ ಜತೆಗೇ, ಅದೇ ಒಡೆಯರು ಬೇರೆ ನಾಯಕಿಯರನ್ನು ಕಡಿಮೆ ಮೊತ್ತಕ್ಕೆ ಒಪ್ಪಿಸುವ ಪ್ರಯತ್ನದಲ್ಲಿದ್ದಾರೆ ಎಂದು ಐಂದ್ರಿತಾಗೆ ತಿಳಿದಿದ್ದೇ ತಡ. ಐಂದ್ರಿತಾ ಒಬ್ಬರಿಗೆ ನೋ ಹೇಳಿದ್ದಾಳಂತೆ. ಇನ್ನೊಬ್ಬ ತಂಡದೊಡೆಯರ ಜತೆಗೆ ಐಂದ್ರಿತಾ ರಾಯಭಾರಿತ್ವಕ್ಕೆ ಮಾತುಕತೆ ನಡೆಯುತ್ತಿದೆಯಂತೆ. ಇನ್ನೂ ಯಾವುದೂ ಅಂತಿಮವಾಗಿಲ್ಲ.
MOKSHA
ಇನ್ನು ಕನ್ನಡ ಚಿತ್ರರಂಗದಲ್ಲಿ ನಂಬರ್ ವನ್ ಪಟ್ಟದಲ್ಲಿರುವ ಮಳೆ ಬೆಡಗಿ ಪೂಜಾ ಗಾಂಧಿ ಕೂಡಾ ಯಾವ ತಂಡಕ್ಕೂ ರಾಯಭಾರಿಯಾಗಲು ಒಪ್ಪಿಲ್ಲವಂತೆ. ಪೂಜಾ ಹೇಳುವಂತೆ, ಕ್ರಿಕೆಟ್ ತಂಡವೊಂದು ತಮ್ಮ ತಂಡದಲ್ಲಿದ್ದು ತಂಡ ಸ್ಪೂರ್ತಿಯಾಗಿ ಇರಬೇಕೆಂಬುದು ಅವರ ಬಯಕೆಯಾದರೆ, ಅವರೂ ಕೂಡಾ ಅಷ್ಟೇ ಮೊತ್ತದ ಉತ್ತಮ ಸಂಭಾವನೆ ನೀಡಬೇಕು. ಸಂಭಾವನೆ ಸರಿಯಾಗಿಲ್ಲದಿದ್ದರೆ ಹೇಗೆ ತಾನೇ ಸಾಧ್ಯ. ನಾವು ಕೂಡಾ ಕಷ್ಟಪಟ್ಟು ಕೆಲಸ ಮಾಡಿ ಅಷ್ಟು ಅಮೂಲ್ಯ ಸಮಯವನ್ನು ಅವರಿಗಾಗಿ ವ್ಯಯಿಸುತ್ತೇವೆಂದ ಮೇಲೆ ಉತ್ತಮ ಸಂಭಾವನೆಯನ್ನೂ ಅಪೇಕ್ಷಿಸುತ್ತೇವೆ ಎನ್ನುತ್ತಾಳೆ ಪೂಜಾ.
ಕೆಪಿಎಲ್ ತಂಡವೊದನ್ನು ಖರೀಸುತ್ತಾಳೆ ಅಂತ ಗುಲ್ಲೆಬ್ಬಿದ್ದ ರಮ್ಯಗೂ ಅತ್ತ ಹಲವು ತಂಡಗಳಿಂದ ರಾಯಭಾರಿಯಾಗಲು ಆಫರ್ ಬಂದಿದೆಯಂತೆ. ಆದರೆ ಆಕೆಯೂ ಇನ್ನೂ ಯಾವುದ್ನೂ ಅಂತಿಮಗೊಳಿಸಿಲ್ಲವಂತೆ.