ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರಕ್ತಪಾತವಿಲ್ಲದ ಥ್ರಿಲ್ಲರ್ 'ಐಪಿಸಿ ಸೆಕ್ಷನ್ 300'! (IPC Section 300 | Shashikanth | Vijay Raghavendra | Priyanka)
ಸುದ್ದಿ/ಗಾಸಿಪ್
Feedback Print Bookmark and Share
 
IPC Section 300
MOKSHA
ಕ್ರೈಂ ಇಲ್ಲದ ಚಿತ್ರಗಳು ಇತ್ತೀಚೆಗೆ ಕನ್ನಡದಲ್ಲಿ ಇಲ್ಲವೇ ಇಲ್ಲ. ಕೈಯಲ್ಲೊಂದು ಲಾಂಗು, ಮಚ್ಚು ಇದ್ದರೇನೇ ಗಾಂಧಿನಗರಕ್ಕೆ ಎಂಟ್ರಿ. ಜತೆಗೆ ಕೋಡಿ ಕೋಡಿ ಹರಿಯುವ ರಕ್ತಪಾತ. ಒಟ್ಟಾರೆ, ಚಿತ್ರವೇ ಭೀಭತ್ಸ. ಆದರೆ ಚಿತ್ರ ಐಪಿಸಿ ಸೆಕ್ಷನ್ 300 ಎಂಬ ಹೆಸರಿಟ್ಟುಕೊಂಡಿರುವ ಥ್ರಿಲ್ಲರ್ ಚಿತ್ರದಲ್ಲಿ ಕ್ರೈಂ ಇದ್ದರೂ ರಕ್ತಪಾತವಿಲ್ಲವಂತೆ.

ಹೌದು. ಶಶಿಕಾಂತ್ ನಿರ್ದೇಶನದ ಐಪಿಸಿ ಸೆಕ್ಷನ್ 300 ಚಿತ್ರ ಸಸ್ಪೆನ್ಸ್, ಥ್ರಿಲ್ಲರ್. ಐಪಿಸಿ ಸೆಕ್ಷನ್ 300 ಕ್ರೈಂಗೆ ಸಂಬಂಧಿಸಿದ ಕಾನೂನನ್ನು ಹೊಂದಿದೆ. ಅಲ್ಲದೆ, ಕ್ಲೈಮಾಕ್ಸ್‌ನಲ್ಲಿ ಬರುವ ಘಟನೆಗಾಗಿ ಈ ಹೆಸರನ್ನು ಇಡಲಾಗಿದೆ ಎನ್ನುತ್ತದೆ ಚಿತ್ರತಂಡ. ಒಳ್ಳೆಯ ಗುರಿ ಇಟ್ಟುಕೊಂಡ ಯುವ ವಕೀಲನಿಗೆ ಸಿಗು ಪ್ರತಿಫಲ ಎಂತಹುದ್ದು ಎಂಬುದೇ ಚಿತ್ರದ ಕತೆ.

ಚಿತ್ರದಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳುವುದಕ್ಕಾಗಿ ನಾಯಕ ವಿಜಯ್ ರಾಘವೇಂದ್ರ 20 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಉದ್ದ ಕೂದಲಿಗೆ ಕತ್ತರಿ ಹಾಕಿಸಿ ಸ್ಲಿಮ್ ಅಂಡ್ ಟ್ರಿಮ್ ಆಗಿದ್ದಾರೆ. ಚಿತ್ರದಲ್ಲಿ ಇವರದು ಲಾಯರ್ ಪಾತ್ರ. ಅದಕ್ಕಾಗಿ ಕಾನೂನಿಗೆ ಸಂಬಂಧಿಸಿದ ಹಲವು ಪುಸ್ತಕಗಳನ್ನು ಗುಡ್ಡೆ ಹಾಕಿ ಓದಿದ್ದಾರೆ. ಚಿತ್ರದ ಮೂಲಕವಾದರೂ ರಿಯಲ್ ಲಾಯರ್ ಆಗುವ ಸನ್ನದ್ಧದಲ್ಲಿದ್ದಾರಂತೆ ವಿಜಯ್. ಚಿತ್ರವನ್ನು ಶಂಕರೇಗೌಡರು ನಿರ್ಮಿಸುತ್ತಿದ್ದಾರೆ. ನಾಯಕಿಯಾಗಿ ಪ್ರಿಯಾಂಕಾ ನಟಿಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಐಪಿಸ್ ಸೆಕ್ಷನ್ 300, ಶಶಿಕಾಂತ್, ವಿಜಯ ರಾಘವೇಂದ್ರ, ಪ್ರಿಯಾಂಕ