ಅಂತೂ ಪುನೀತ್ ರಾಜ್ಕುಮಾರ್ ಮತ್ತು ಯೋಗರಾಜ್ ಭಟ್ಟರ ಕಾಂಬಿನೇಷನ್ನಲ್ಲಿ ಚಿತ್ರವೊಂದು ಮೂಡಿ ಬರುವ ಬಗ್ಗೆ ಗಾಂಧಿನಗರದಲ್ಲಿ ಕಾಡ್ಗಿಚ್ಚಿನಂತೆ ಸುದ್ದಿ ಹಬ್ಬಿದೆ. ಆದರೆ ಇದು ಲಗೋರಿಯಲ್ಲ. ಹೊಸದೊಂದು ಚಿತ್ರದಲ್ಲಿ ಇವರಿಬ್ಬರನ್ನು ಒಂದು ಮಾಡಲು ಹೊರಟಿರುವುದು ಸಿನಿಮಾ ಹಂಚಿಕೆಯಲ್ಲಿ ಹೆಸರಾಗಿರುವ ನಿರ್ಮಾಪಕ ಜಯಣ್ಣ.
ಈ ಚಿತ್ರವನ್ನು ಭೋಗೇಂದ್ರ ಅವರ ಜೊತೆ ನಿರ್ಮಿಸಲಿರುವ ಜಯಣ್ಣ, ಈ ಮೊದಲು ಹಲವು ಚಿತ್ರಗಳ ಹಂಚಿಕೆದಾರರಾಗಿ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ತೆರೆಕಂಡ ರಾಜ್ ದಿ ಶೋಮ್ಯಾನ್ ಚಿತ್ರದ ಹಂಚಿಕೆಯಲ್ಲಿ ನಿರ್ಮಾಪಕರಿಗೆ ನೆರವಾಗಿದ್ದರು. ಜೊತೆಗೆ ಜಾಜಿಮಲ್ಲಿಗೆ, ಗಿಲ್ಲಿ, ಅರ್ಜುನ್ ಚಿತ್ರಗಳಲ್ಲಿ ನಿರ್ಮಾಪಕರಾಗಿಯೂ ಸಹಕಾರ ನೀಡಿದ್ದಾರೆ.
MOKSHA
ಇತ್ತ ಯೋಗರಾಜ್ ಭಟ್ಟರ ಮುಂಗಾರು ಮಳೆ, ಗಾಳಿಪಟ ಚಿತ್ರಗಳಲ್ಲಿ ಪುನೀತ್ ನಟಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ. ಆ ಬಳಿಕ ಲಗೋರಿ ಚಿತ್ರ ಸೆಟ್ಟೇರಲಿಲ್ಲ. ಇದೀಗ ಭಟ್ಟರ ನಾಲ್ಕನೇ ಚಿತ್ರದಲ್ಲಿ ಪುನೀತ್ ಜೊತೆ ಮಾಡುವ ಯೋಗ ಕೂಡಿ ಬಂದಿದೆ. ಚಿತ್ರದ ನಾಯಕಿ ಸೇರಿದಂತೆ ಕಲಾವಿದರು, ತಂತ್ರಜ್ಞರ ಆಯ್ಕೆ ಇನ್ನು ಅಂತಿಮಗೊಂಡಿಲ್ಲ.
ಅಂದಹಾಗೆ ಚಿತ್ರ ನೋಡಬೇಕಾದರೆ ಒಂದು ವರ್ಷವಾದರೂ ಕಾಯಲೇಬೇಕು. ಕಾರಣ ಇಷ್ಟೇ. ಪುನೀತ್ ಡೇಟ್ಸ್ ಕೊಟ್ಟಿರುವುದೇ ಮುಂದಿನ ವರ್ಷದ ಏಪ್ರಿಲ್ನಲ್ಲಿ.