ಉಪೇಂದ್ರ ಅಭಿಮಾನಿಗಳೇ ಹುಷಾರ್! ಹೀಗೆನ್ನುತ್ತಾರೆ ನಿರ್ದೇಶಕ, ನಟ ಆದರ್ಶ. ಹೌದು. ಇವರ ನಿರ್ದೇಶನದ ಹುಷಾರು ಚಿತ್ರವನ್ನು ಉಪೇಂದ್ರ ಅಭಿಮಾನಿಗಳಿಗಾಗಿಯೇ ಮಾಡಿದ್ದಾರೆ. ಇವರು ಸ್ವತಃ ಉಪ್ಪಿ ಅಭಿಮಾನಿ. ಉಪ್ಪಿ ನಿರ್ದೇಶನದ ಶ್! ಸಿನಿಮಾದ ರೀತಿಯಲ್ಲಿ ಹುಷಾರಾಗಿ ಮಾಡಿದ್ದಾರೆ.
MOKSHA
ಈ ಹಿಂದೆ ದುಂಬಿ, ನಗೆಹಬ್ಬ ಚಿತ್ರಗಳನ್ನು ನಿರ್ದೇಶಿಸಿದ್ದರು ಆದರ್ಶ. ಆದರೆ ಅದೇಕೋ ಬಾಕ್ಸ್ ಆಫೀಸಿನಲ್ಲಿ ಸೋತು ಹೋಯಿತು. ಆದರೆ ಅದನ್ನೇ ಸವಾಲಾಗಿ ಸ್ವೀಕರಿಸಿದ ಆದರ್ಶ ಹುಷಾರು ಚಿತ್ರ ನಿರ್ದೇಶಿಸಿದ್ದಾರೆ. ಚಿತ್ರದ ಶೇ.60 ರಷ್ಟು ಭಾಗ ಕಾಡಿನಲ್ಲಿಯೇ ನಡೆಯುತ್ತದೆ. ಚಿತ್ರದಲ್ಲಿ ಹಳ್ಳಿಗಳಲ್ಲಿ ನಡೆಯುವ ಮತಾಂತರದ ಬಗ್ಗೆ ಸೂಕ್ಷ್ಮವಾಗಿ ಧ್ವನಿ ಎತ್ತಲಾಗಿದೆಯಂತೆ.
ಚಿತ್ರದಲ್ಲಿ ನಾಯಕ ಹಿಂದೂ ಧರ್ಮದ ಬಗ್ಗೆ ಹೆಮ್ಮೆಯಿಂದ ಮಾತನಾಡುವ ದೃಶ್ಯಕ್ಕೆ ಸೆನ್ಸಾರ್ ಕತ್ತರಿ ಹಾಕಿದೆ. ಉಳಿದಂತೆ ಎಲ್ಲವೂ ಚೆನ್ನಾಗಿ ಮೂಡಿ ಬಂದಿದೆ. ಈ ಬಾರಿ ಗೆದ್ದೇ ಗೆಲ್ಲುತ್ತೇವೆ ಎಂಬ ನಂಬಿಕೆ ಇದೆ ಎನ್ನುತ್ತಾರೆ ಆದರ್ಶ್. ಚಿತ್ರದ ನಿರ್ದೇಶನದ ಜೊತೆಗೆ ನಾಯಕನಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಗಂಗಾ ಕಾವೇರಿಯಲ್ಲಿ ನಟಿಸಿದ್ದ ಮಲ್ಲಿಕಾ ಕಪೂರ್ ಚಿತ್ರದ ನಾಯಕಿ. ಮೊದಲ ಬಾರಿಗೆ ಕಾಮಿಡಿ ಹೀರೋಯಿನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.