ನಟ ಮೋಹನ್ ಚೊಚ್ಚಲ ನಿರ್ದೇಶನದ ಕೃಷ್ಣ ನೀ ಲೇಟಾಗ್ ಬಾರೋ ಲೇಟಾಗುತ್ತಿದೆಯಂತೆ. ಈಗಷ್ಟೇ ಚಿತ್ರದ ರೀರೆಕಾರ್ಡಿಂಗ್ ಕಾರ್ಯ ನಡೆಯುತ್ತಿದೆ.
ಅಂದಹಾಗೆ, ಚಿತ್ರ ತಡವಾಗಲು ಕಾರಣವೇನು ಎಂದು ನಿರ್ದೇಶಕರಲ್ಲಿ ಕೇಳಿದರೆ ಅವರು ಹೇಳುವುದಿಷ್ಟೇ. ಎಲ್ಲಾ ಕಲಾವಿದರನ್ನು ಒಂದೇ ಫ್ರೇಮ್‌ನಲ್ಲಿ ಒಟ್ಟುಗೂಡಿಸುವುದೇ ಸವಾಲಾಯ್ತು ಎನ್ನುತ್ತಾರೆ ಮೋಹನ್. ಚಿತ್ರದಲ್ಲಿ ಒಟ್ಟು 14 ಟ್ರ್ಯಾಕ್‌ಗಳಿವೆ. ಅವೆಕ್ಕೆಲ್ಲಾ ಒಂದೇ ಕ್ಲೈಮಾಕ್ಸ್. ಬಹುಶಃ ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಇಂಥ ಪ್ರಯೋಗ ಮಾಡಿರುವುದು ಎಂದೂ ವಿವರಿಸುತ್ತಾರೆ.
ತಮ್ಮ ಮೊದಲ ಚಿತ್ರ ನಿಧಾನವಾದರೂ ಪರವಾಗಿಲ್ಲ. ಆದರೆ ಚೆನ್ನಾಗಿ ಬರಲಿ ಎಂದು ಮುತುವರ್ಜಿ ವಹಿಸಿಕೊಂಡು ಚಿತ್ರ ನಿರ್ದೇಶಿಸಿದ್ದಾರಂತೆ ಮೋಹನ್. ನಿರ್ದೇಶನದ ಜೊತೆಗೆ ನಟನಾಗಿಯೂ ಅಭಿನಯಿಸುತ್ತಿದ್ದಾರೆ. ಇವರಿಗೆ ಪ್ರೀತಿಯ ಗೆಳೆಯ ರಮೇಶ್ ಅರವಿಂದ್ ಸಾಥ್ ನೀಡಿದ್ದಾರೆ. ಚಿತ್ರದ ಪ್ರತಿ ದೃಶ್ಯದಲ್ಲೂ ನಗೆಹಬ್ಬವಿದೆ ಎಂದು ತಿಳಿಸುತ್ತಾರೆ ಮೋಹನ್.