ಕೊನೆಗೂ ವಿದೇಶದಲ್ಲಿ ರಾಜ್- ದಿ ಶೋಮ್ಯಾನ್ ಚಿತ್ರ ಬಿಡುಗಡೆಯಾಗಿದೆ. ಚಿತ್ರದ ವಿದೇಶ ಹಂಚಿಕೆ ಹಕ್ಕನ್ನು ಪಡೆದಿರುವ ಬೆವಿನ್ ಎಕ್ಸ್ಪೋರ್ಟ್ಸ್ ಇಂಡಿಯಾ ಪ್ರೈ.ಲಿ. ಚಿತ್ರದ ಬಿಡುಗಡೆ ಬಗ್ಗೆ ಅಧಿಕೃತವಾಗಿ ತಿಳಿಸಿದೆ.
ಮೊದಲ ಹಂತದಲ್ಲಿ ಸಿಂಗಾಪುರ ಹಾಗೂ ಆಸ್ಟ್ತ್ರೇಲಿಯಾಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಅಕ್ಟೋಬರ್ 4ರಂದು ಆಸ್ಟ್ತ್ರೇಲಿಯಾದ ಮೆಲ್ಬರ್ನ್ ಹಾಗೂ 11ರಂದು ಸಿಡ್ನಿಯಲ್ಲಿ ತೆರೆಕಾಣಲಿದೆ. ಹಾಗೆಯೇ ಎರಡನೇ ಹಂತದಲ್ಲಿ ನ್ಯೂಜಿಲ್ಯಾಂಡ್, ಅಮೇರಿಕಾ, ದುಬೈ, ಮಲೇಷಿಯಾ, ಯುಕೆ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದೆ ಬೆವಿನ್ ಸಂಸ್ಥೆ.
ಈ ಸಂಸ್ಥೆ ಕಳೆದ ಮೂರು ವರ್ಷಗಳಿಂದ ಬೆವಿನ್ ಕನ್ನಡ ಚಿತ್ರಗಳನ್ನು ಜಾಗತಿಕ ಹಂಚಿಕೆಯಲ್ಲಿ ತೊಡಗಿಸಿಕೊಂಡಿದ್ದು, ಕನ್ನಡದ ಅಭಿ, ಆಕಾಶ್, ಅಜಯ್, ವೀರ ಕನ್ನಡಿಗ, ಮುಂಗಾರು ಮಳೆ, ಅರಮನೆ, ಗಾಳಿಪಟ, ಸತ್ಯವಾನ್ ಸಾವಿತ್ರಿ ಸೇರಿದಂತೆ ಹದಿನೈದಕ್ಕೂ ಹೆಚ್ಚು ಚಿತ್ರಗಳನ್ನು ವಿದೇಶದಲ್ಲಿ ಬಿಡುಗಡೆ ಮಾಡಿದೆ. ಆದರೆ ಇದೀಗ ರಾಜ್ ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಜಗತ್ತಿನಾದ್ಯಂತ ಏಕಕಾಲದಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿ ಕುತೂಹಲ ಸೃಷ್ಟಿಸಿದ್ದರು. ಕೊನೆಗೂ ನಿರ್ದೇಶಕ ಪ್ರೇಮ್, ಚಿತ್ರ ಏಕಕಾಲಕ್ಕೆ ಬಿಡುಗಡೆಯಾಗಿಲ್ಲ ಎಂದು ಒಪ್ಪಿಕೊಂಡಿದ್ದಲ್ಲದೆ, ಇದು ವಿವಾದಕ್ಕೂ ಎಡೆ ಮಾಡಿಕೊಟ್ಟಿತು.