ಹೆಸರು ಆರತಿ ಛಾಬ್ರಿಯಾ. ಈಕೆ ಕನ್ನಡದಲ್ಲಿ ಹಲವು ಅವಕಾಶಗಳನ್ನು ಬಾಚಿಕೊಂಡ ಮುಂಬೈ ಬೆಡಗಿ. ಅಹಂ ಪ್ರೇಮಾಸ್ಮಿಯಲ್ಲಿ ರವಿಚಂದ್ರನ್ ಸಹೋದರ ಬಾಲಾಜಿ ಜತೆಗೆ ಅಭಿನಯಿಸಿದ ಆರತಿ, ಬಳಿಕ ಶಿವರಾಜ್ಕುಮಾರ್ ಜತೆ ನಟಿಸಿ ಅವರನ್ನು ಸಂತನನ್ನಾಗಿಸಿದರು. ಈಗ ಈಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೋಡಿಯಾಗಿ ನಟಿಸುತ್ತಿದ್ದಾರೆ.
ಈಗಷ್ಟೇ ಉಪೇಂದ್ರ ಅಭಿನಯದ ರಜನಿ ಚಿತ್ರದ ಶೂಟಿಂಗ್ ಮುಗಿಸಿ ಮತ್ತೆ ಗಾಂಧಿನಗರಕ್ಕೆ ಬಂದಿದ್ದಾರೆ. ದರ್ಶನ್ ಜತೆಗೆ ಇನ್ನೂ ಹೆಸರಿಡದ ಚಿತ್ರದಲ್ಲಿ ನಟಿಸಲು ಅವಕಾಶ ಪಡೆದ ಈ ಮುಂಬೈ ಜಾಣೆಗೆ ಈಗ ಫುಲ್ ಖುಷಿ. ಅಷ್ಟೇ ಬ್ಯುಸಿ ಕೂಡಾ.
ಖುಷಿ ಯಾತಕ್ಕೆ ಅಂದರೆ ಆಕೆ ಒಂದೇ ಉಸಿರಿನಲ್ಲಿ ಮುಂಬೈ ನಗರಿಯಿಂದ ದಕ್ಷಿಣಕ್ಕೆ ಬರುವಾಗ ದರ್ಶನ್ ಜತೆಗೆ ನಟಿಸಲು ಕನಸು ಕಂಡಿದ್ದೆ. ನಾನು ಆತನ ಫ್ಯಾನ್. ಕನ್ನಡದ ನಟರ ನನ್ನ ಪಟ್ಟಿಯಲ್ಲಿ ನಂ.1 ಸ್ಥಾನವನ್ನು ಅವರಿಗೆ ನೀಡಿದ್ದೇನೆ. ಅವರೆಂದರೆ ನನಗೆ ತುಂಬ ಇಷ್ಟ. ಈಗ ತಾನಾಗಿಯೇ ಅವರ ಜತೆಗೆ ನಟಿಸಲು ಅವಕಾಶ ಹಡುಕಿಕೊಂಡು ಬಂದರೆ ಯಾರಿಗೆ ತಾನೇ ಖುಷಿಯಾಗಲ್ಲ ಹೇಳಿ ಎಂದು ನಗುತ್ತಾಳೆ ಆರತಿ.
IFM
ಸಧ್ಯಕ್ಕಂತೂ ಆರತಿ ಛಾಬ್ರಿಯಾ ಕನ್ನಡದಲ್ಲಿ ಬ್ಯುಸಿ ನಟಿಯಾಗಿದ್ದಾರೆ. ಅಷ್ಟೇ ಅಲ್ಲ, ತೆಲುಗು, ತಮಿಳಿನಲ್ಲೂ ಕೂಡಾ ಆಫರ್ಗಳು ಬರುತ್ತಿವೆ. ಕನ್ನಡದಲ್ಲೂ ಸಾಕಷ್ಟು ಅವಕಾಶಗಳಿಗೇನೂ ಕೊರತೆಯಿಲ್ಲ. ನನ್ನ ಅದೃಷ್ಟಕ್ಕೆ ಕ್ನಡದ ಅತ್ಯುತ್ತಮ ಸ್ಟಾರ್ ನಟರ ಜೊತೆಗೆ ನಟಿಸುವ ಚಿತ್ರಗಳಿಗೆ ಉತ್ತಮ ಅವಕಾಶಗಳೇ ಬರುತ್ತಿವೆ ಎನ್ನುತ್ತಾರೆ ಅವರು. ಚಿತ್ರದ ಸಂಪೂರ್ಣ ಮಾಹಿತಿ ಇನ್ನು ಹೊರಬರಬೇಕಿದೆ. ಚಿತ್ರ ತೆಲುಗಿನ 'ಸೌರ್ಯಂ'ನ ರಿಮೇಕ್.
ಹಾಗಂತ, ಹಿಂದಿಯಲ್ಲಿ ಭವಿಷ್ಯವಿಲ್ಲ ಅಂತ ಅಲ್ಲ. ಈಗಾಗಲೇ ಬಾಲಿವುಡ್ಡಿನಲ್ಲಿ ಇವರ ಅಭಿನಯದ ಎರಡು ಚಿತ್ರಗಳ ಪೈಕಿ ಒಂದು ಮೊನ್ನೆಯಷ್ಟೆ ತೆರೆಕಂಡಿದೆ. ಇನ್ನೊಂದರ ಮೇಲೆ ಅಪಾರ ಭರವಸೆಯಿಂದ ಕನಸು ಕಾಣುತ್ತಾರೆ ಆರತಿ.