ಅನಿಸುತಿದೆ ಯಾಕೋ ಇಂದು... ಎಂದು ಮುಂಗಾರು ಮಳೆಯಲ್ಲಿ ಮನೋಜ್ಞವಾಗಿ ಹಾಡಿದ ಹಿಂದಿಯ ಖ್ಯಾತ ಗಾಯಕ ಸೋನು ನಿಗಮ್ ಅವರನ್ನು ಕನ್ನಡದಲ್ಲಿಯೇ ನೆರೆಯೂರುವಂತೆ ಮಾಡಲು ನೈಸ್ ಕಂಪೆನಿ ಮುಖ್ಯಸ್ಥ ಅಶೋಕ್ ಖೇಣಿ ಭಾರೀ ಪ್ರಯತ್ನ ನಡೆಸಿದ್ದಾರಂತೆ.
ಸೋನು ನಿಗಮ್ ಈಗ ಬೆಂಗಳೂರಿನಲ್ಲಿ ಪ್ರಸಿದ್ದಿಯಾಗಿದ್ದಾರೆ. 'ನೀನೇ ಬರಿ ನೀನೆ' ಆಲ್ಬಂ ಮೂಲಕ ನಗರದಲ್ಲಿ ಬಿಡುಗಡೆ ಕಂಡಿದ್ದು ಪ್ರಸಿದ್ಧಿಯಾಗುತ್ತಿದೆ. ಈ ಆಲ್ಬಂನಲ್ಲಿ ಹಾಡಿದ ಸೋನುಗೆ, ಒಂದು ಫ್ಲ್ಯಾಟ್ ಕೊಟ್ಟು ಕೈ ತುಂಬಾ ಕೆಲಸ ಕೊಡುತ್ತೇನೆ. ಅಲ್ಲದೆ, ಸಿನಿಮಾದಲ್ಲಿ ಹೀರೋ ಆಗುವುದಕ್ಕೆ ನಾನೇ ಒತ್ತಾಯಿಸುತ್ತೇನೆ ಎಂದರು ಖೇಣಿ. ಖೇಣಿ ಇತ್ತೀಚೆಗೆ 'ನೀನೇ ಬರೀ ನೀನೇ' ಎಂಬ ಆಲ್ಬಂಗೆ ಒಂದು ಕೋಟಿ ರೂಪಾಯಿ ವೆಚ್ಚ ಮಾಡಿದ್ದಾರೆ. ಒಂಭತ್ತು ಹಾಡುಗಳನ್ನು ಸೋನು ಅವರಿಂದ ಹಾಡಿಸಿದ್ದಾರೆ.
MOKSHA
ಇನ್ನೊಂದು ಕುತೂಹಲಕಾರಿ ವಿಷಯ ಇಲ್ಲಿದೆ. ಇಷ್ಟೆಲ್ಲಾ ಹಾಡಿದರೂ, ಸೋನು ಒಂದು ರೂಪಾಯಿಯನ್ನು ತೆಗೆದುಕೊಳ್ಳಲಿಲ್ಲವಂತೆ. ಸೋನು ಅವರ ಕನ್ನಡ ಪ್ರೇಮವೇ ಇದಕ್ಕೆ ಕಾರಣ ಎನ್ನುತ್ತಾರೆ ಖೇಣಿ. ಅದಕ್ಕಾಗಿ ಅವರನ್ನು ಕನ್ನಡದಲ್ಲಿಯೇ ಉಳಿಸಲು ನಿರ್ಧರಿಸಿದ್ದಾರೆ ಅವರು. ಅದೆಲ್ಲಾ ಹಾಗಿರಲಿ. ಕಳೆದ ಕೆಲವು ವರ್ಷಗಳಿಂದ ಎಂಟು ಸಿನಿಮಾಗಳನ್ನು ನಿರ್ಮಾಣ ಮಾಡುತ್ತೇನೆ ಎಂದು ಹೇಳಿರುವ ಖೇಣಿ ಈಗ ಮತ್ತೆ ಆ ಪ್ರಾಜೆಕ್ಟ್ ಕೈಗೆತ್ತಿಕೊಳ್ಳುವ ಭರವಸೆ ನೀಡಿದ್ದಾರೆ. ಅಂತೂ ನೈಸ್ ಆಗಿ ಮಾರ್ಗ ಬದಲಿಸಿರುವ ಖೇಣಿ ಸಿನಿಮಾರಂಗದತ್ತ ಹೆಜ್ಜೆ ಇರಿಸಿರುವುದರಲ್ಲಿ ಎರಡು ಮಾತಿಲ್ಲ.