ಚಿತ್ರ ಸಾಹಿತಿ ಕೆ. ಕಲ್ಯಾಣ್ ಹೊಸದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ನೂತನ ಮಾದರಿಯ ಆಲ್ಬಂ ತರುವಲ್ಲಿ ಬ್ಯುಸಿಯಾಗಿದ್ದಾರೆ.
ಹತ್ತು ಸಂಚಿಕೆಯಲ್ಲಿ ಮೂಡಿ ಬರಲಿರುವ ಈ ಆಲ್ಬಂನಲ್ಲಿ ಗಜಲ್‌ಗೆ ಸಂಬಂಧಿಸಿದ ಒಂದು ಅಧ್ಯಾಯ, ದಾಸರ ಪದಗಳ ಸಂಗ್ರಹ, ಭಕ್ತಿಗೀತೆಗಳ ಗುಚ್ಛ, ಮಾಧುರ್ಯ ಪ್ರಧಾನ ಗೀತೆಗಳು ಸೇರಿದಂತೆ ಹತ್ತು ರೀತಿಯ ವಿಭಿನ್ನ ಸಂಗೀತ ಆಯಾಮಗಳನ್ನು ಬಳಸಿಕೊಂಡು ಇದನ್ನು ಸಿದ್ಧಪಡಿಸಲಿದ್ದಾರೆ.
ಅಷ್ಟೇ ಅಲ್ಲ, ಇದಕ್ಕಾಗಿ ಚಿತ್ರ ಸಂಗೀತಕ್ಕೆ ತಾತ್ಕಾಲಿಕ ವಿಆರ್ಎಸ್ ನೀಡಿ ಮನೆಯಲ್ಲೇ ಕುಳಿತು ಸಾಹಿತ್ಯ ಬರೆಯುತ್ತಿದ್ದಾರೆ. ಈಗಾಗಲೇ ಇವರು ಸಾಹಿತ್ಯ ನೀಡಿರುವ ಪ್ರೇಮ್ ಕಹಾನಿ, ಸೂರ್ಯಕಾಂತಿ, ಸೆಲ್ಯೂಟ್, ಸ್ಕೂಲ್ ಮಾಸ್ಟರ್, ರಾವಣ, ಒಲವೇ ಮಂದಾರ ಮೊದಲಾದ ಚಿತ್ರಗಳು ತೆರೆಗೆ ಬರಲು ಸಿದ್ಧವಾಗಿದೆ. ಮತ್ತೊಂದು ವಿಶೇಷತೆಯೆಂದರೆ ಇಲ್ಲಿ ಹೆಚ್ಚಿನ ಕನ್ನಡ ಗಾಯಕರನ್ನೇ ಬಳಸಿಕೊಳ್ಳಲಾಗುವುದು. ಈ ಬಗ್ಗೆ ಸಾಕಷ್ಟು ತಯಾರಿ ನಡೆಸಲಾಗಿದೆ. ಅಲ್ಲದೆ, ಜೇಸುದಾಸ್, ಎಸ್ಪಿ ಬಾಲಸುಬ್ರಮಣ್ಯಂ, ಮಧುಬಾಲಕೃಷ್ಣ ಸೇರಿದಂತೆ ಹತ್ತು ಹಲವು ಗಾಯಕರು ಅವೆಲ್ಲವನ್ನು ಪರೀಶೀಲಿಸಿ, ವಿಂಗಡಣೆ ಮಾಡಲಿದ್ದಾರೆ.